ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾದ ನಟ ವಿಜಯ್ ಅಭಿನಯದ ‘ಬಿಗಿಲ್’ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

ವಿಶ್ವದಾದ್ಯಂತ ತೆರೆಕಂಡ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 5 ದಿನಗಳಲ್ಲಿ ₹200 ಕೋಟಿ ಬಾಚಿಕೊಂಡಿದೆ. ಕಾರ್ತಿ ಅಭಿನಯದ ‘ಕೈದಿ’ ಸಿನಿಮಾವೂ ಅಂದೇ ಬಿಡುಗಡೆಯಾಗಿದ್ದು, ಇದರ ಗಳಿಕೆಗೆ ಸ್ವಲ್ಪ ತಡೆಯಾಯಿತು ಎಂಬ ಮಾತು ಕಾಲಿವುಡ್ನಲ್ಲಿ ಕೇಳಿಬರುತ್ತಿದೆ.

ತೆಲುಗಿನಲ್ಲಿ ಈ ಚಿತ್ರಕ್ಕೆ ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆ ಸಿಗದಿದ್ದರೂ, ತಮಿಳು ನಾಡಿನಲ್ಲಿ ಮೊದಲ ದಿನವೇ ಅದ್ಧೂರಿ ಸ್ವಾಗತ ಸಿಕ್ಕಿತ್ತು.

ತಮಿಳುನಾಡಿನಲ್ಲಿ 'ಬಿಗಿಲ್' ಸಿನಿಮಾ ಮೊದಲ ದಿನವೇ ನಿರೀಕ್ಷೆಯಂತೆ ದಾಖಲೆ ಬರೆದಿದೆ. ಚೆನ್ನೈ ಒಂದರಲ್ಲೇ ಈ ಸಿನಿಮಾ 2 ಕೋಟಿ ಗಳಿಸಿದರೆ, ತಮಿಳುನಾಡಿನಲ್ಲಿ 23 ಕೋಟಿ ಗಳಿಸಿದೆ. ಅಲ್ಲದೆ ವಿಶ್ವದಾದ್ಯಂತ ಮೊಲದ ದಿನ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ:ಬಿಗಿಲ್ ಸಿನಿಮಾ ವಿಮರ್ಶೆ–ಹಿಂಡಿದ ಭಾವದ ಕ್ರೀಡಾ ಕಥನ

ತೆರೆ ಕಂಡ ಮೂರೇ ದಿನಗಳಲ್ಲಿ ವಿಶ್ವದಾದ್ಯಂತ ಈ ಸಿನಿಮಾ 100 ಕೋಟಿ ಗಳಿಸಿತ್ತು. ಈ ಬಗ್ಗೆ ಸಿನಿ ವ್ಯವಹಾರಗಳ ವೀಶ್ಲೇಷಕ ರಮೇಶ್ ಬಾಲ ಅವರು ಟ್ವೀಟ್ ಮಾಡಿದ್ದರು.

ವಿಜಯ್ ಹಾಗೂ ನಿರ್ಮಾಪಕಿ ಅರ್ಚನಾ ಒಟ್ಟಿಗೆ ಮಾಡಿರುವ ಮೂರನೇ ಚಿತ್ರ ‘ಬಿಗಿಲ್’. ಈ ಹಿಂದೆ ‘ಥೇರಿ’ ಹಾಗೂ ‘ಮರ್ಸಲ್’ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಅಟ್ಲಿ ಕುಮಾರ್ ನಿರ್ದೇಶನ ಇದಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.