ಚೆನ್ನೈ: ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದ ಮಲಯಾಳಂನ ‘2018’ ಚಿತ್ರದ ನಿರ್ದೇಶಕ ಜೂಡ್ ಆ್ಯಂಥನಿ ಜೋಸೆಫ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

ಕೇರಳ ಪ್ರವಾಹದ ಕುರಿತಾದ ‘2018– ಎವ್ರಿಒನ್ ಈಸ್ ಎ ಹೀರೋ’ ಚಿತ್ರ 2024ರ ಆಸ್ಕರ ಪ್ರಶಸ್ತಿಯ ಅತ್ಯುತ್ತಮ ಅಂತರರಾಷ್ಟ್ರೀಯ ಚಿತ್ರ ವಿಭಾಗಕ್ಕೆ ಪ್ರವೇಶ ಪಡೆದಿದೆ.

ರಜನಿಕಾಂತ್ ಅವರನ್ನು ಭೇಟಿಯಾಗಿ ಚಿತ್ರದ ಬಗ್ಗೆ ಚರ್ಚಿಸಿ, ಆಶೀರ್ವಾದ ಪಡೆದ ಚಿತ್ರಗಳನ್ನು ಜೋಸೆಫ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರದ ಕುರಿತು ರಜನಿಕಾಂತ್ ‘ಎಂತಹ ಅದ್ಭುತ ಚಿತ್ರ, ಹೇಗೆ ಚಿತ್ರಿಸಿದಿರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದ್ಭುತ ಕ್ಷಣಗಳು’ ಎಂದು ಜೋಸೆಫ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಚಿತ್ರವು 2023ರ ಮೇನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ನಿರ್ಮಾಪಕರ ಪ್ರಕಾರ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ₹200 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
.2024ರ ಆಸ್ಕರ್ಗೆ ಸ್ಪರ್ಧಿಸಲು ‘2018’ ಮಲಯಾಳಂ ಸಿನಿಮಾ ಭಾರತದಿಂದ ಅಧಿಕೃತ ಪ್ರವೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.