ಬೆಂಗಳೂರು: ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಹೇಳಿಕೆ ಮೂಲಕ ಸಂಚಲನ ಮೂಡಿಸಿರುವ ‘ಆ ದಿನಗಳು’ ಖ್ಯಾತಿಯ ಚೇತನ್, ಇದೀಗ ಮತ್ತೆ ಧರ್ಮಗಳ ಬಗ್ಗೆ ಟ್ವೀಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

‘ಕಾಂತಾರ’ ಸಿನಿಮಾದಲ್ಲಿ ಹೇಳಲಾದ ಕೆಲ ವಿಚಾರಗಳ ಬಗ್ಗೆ ಇತ್ತೀಚೆಗೆ ಚೇತನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ರಿಷಬ್ ಶೆಟ್ಟಿ ಸಂದರ್ಶನದಲ್ಲಿ ಹೇಳಿದ್ದರು. ಆದರೆ, ಇದನ್ನು ಚೇತನ್ ವಿರೋಧಿಸಿದ್ದರು.

‘ಭಾರತವು ವೈವಿಧ್ಯಮಯವಾದ ಮತ್ತು ರೋಮಾಂಚಕವಾದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಹೊಂದಿದೆ. ನಮ್ಮ ಆದಿವಾಸಿ, ಅಲೆಮಾರಿ ಮೂಲನಿವಾಸಿ ವಿಶ್ವಗಳನ್ನು ಸಂರಕ್ಷಿಸುವ ಮತ್ತು ಗುರುತಿಸುವ ಆಂದೋಲನವು ನಡೆಯುತ್ತಿದೆ. ಹಿಂದೂ ಧರ್ಮ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಇಂತಹ ‘ಆಮದು ಮಾಡಿಕೊಂಡ’ ಧರ್ಮಗಳು ಇತರ ಎಲ್ಲಾ ಧರ್ಮಗಳಂತೆಯೇ ಅವಿಭಾಜ್ಯವಾಗಿವೆ. ಎಲ್ಲಾ ಅಸಮಾನತೆಗಳನ್ನು ನಾವು ವಿರೋಧಿಸಬೇಕು’ ಎಂದು ಚೇತನ್ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ‘ಕಾಂತಾರ’ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದ ಚೇತನ್, ‘ನಮ್ಮ ಕನ್ನಡ ಚಿತ್ರ ‘ಕಾಂತಾರ’ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ತಂದಿದೆ. ಆದರೆ, ಭೂತಕೋಲ ಹಿಂದೂ ಸಂಸ್ಕೃತಿ ಎಂದು ಹೇಳಿರುವ ನಿರ್ದೇಶಕ ರಿಷಬ್ ಶೆಟ್ಟಿ ಅವರ ಮಾತು ಸುಳ್ಳು. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು. ವೈದಿಕ-ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆ ಮತ್ತು ಹೊರಗೆ ಸತ್ಯದೊಂದಿಗೆ ಪ್ರದರ್ಶಿಸಬೇಕು ಎಂದು ನಾನು ಕೋರುತ್ತೇನೆ’ ಎಂದು ಟ್ವೀಟ್ ಮಾಡಿದ್ದರು.

ಚೇತನ್ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು.

ಇವನ್ನೂ ಓದಿ...

*ಭೂತ ಕೋಲ ಹಿಂದೂ ಸಂಸ್ಕೃತಿ: ರಿಷಬ್ ಶೆಟ್ಟಿ ಹೇಳಿಕೆ ಸುಳ್ಳೆಂದ ಚೇತನ್ 'ಅಹಿಂಸಾ'

*ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು: ನಟ ಚೇತನ್ಗೆ ಉಪೇಂದ್ರ ಟಾಂಗ್

*ಕಾಂತಾರದಿಂದ ದೊಡ್ಡ ಚಿತ್ರಗಳಿಗೆ ಹಾರ್ಟ್ ಅಟ್ಯಾಕ್: ರಿಷಬ್ ನಟನೆಗೆ ಆರ್ಜಿವಿ ಸಲಾಂ

*‘ಕಾಂತಾರ’ ನೋಡಿ ಅನುಷ್ಕಾ ಫಿದಾ: ರಿಷಬ್ ಶೆಟ್ಟಿಯನ್ನು ಕೊಂಡಾಡಿದ ಬಾಹುಬಲಿ ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.