ಹೈದರಾಬಾದ್: ರಕ್ತದೊತ್ತಡ ಏರಿಳಿತದ ಸಮಸ್ಯೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ರಜನಿಕಾಂತ್ ಅವರ ಆರೋಗ್ಯ ಸುಧಾರಿಸುತ್ತಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕಳುಹಿಸುವ ಕುರಿತು ಭಾನುವಾರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶನಿವಾರ ಅಪೋಲೊ ಆಸ್ಪತ್ರೆಯು ತಿಳಿಸಿದೆ.

70 ವರ್ಷದ ರಜನಿಕಾಂತ್ ಅವರ ಆರೋಗ್ಯ ಮಾಹಿತಿಯನ್ನು ನೀಡಿರುವ ಆಸ್ಪತ್ರೆಯು, ಇನ್ನೂ ಕೆಲ ವರದಿಗಳು ಬರಬೇಕಿವೆ. ಇದರ ಫಲಿತಾಂಶ ಹಾಗೂ ಶನಿವಾರ ರಾತ್ರಿ ಅವರ ರಕ್ತದೊತ್ತಡದ ಸ್ಥಿತಿಯನ್ನು ಗಮನಿಸಿಕೊಂಡು ಭಾನುವಾರ ಬೆಳಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ರಜನಿಕಾಂತ್ ಅವರಿಗೆ ಕರೆ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಆರೋಗ್ಯವನ್ನು ವಿಚಾರಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ. ಡಿ.13ರಿಂದ ಹೈದರಾಬಾದ್ನಲ್ಲೇ ತಮಿಳು ಚಿತ್ರ ‘ಅನ್ನಾತ್ತೆ’ ಚಿತ್ರೀಕರಣದಲ್ಲಿ ಅವರು ನಿರತರಾಗಿದ್ದರು. ಚಿತ್ರೀಕರಣ ಸ್ಥಳದಲ್ಲಿದ್ದ ನಾಲ್ವರು ಸಿಬ್ಬಂದಿಗೆ ಕೋವಿಡ್ ದೃಢಪಟ್ಟ ಕಾರಣ, ರಜನಿಕಾಂತ್ ಪ್ರತ್ಯೇಕ ವಾಸದಲ್ಲಿದ್ದರು. ಕೋವಿಡ್ ಪರೀಕ್ಷೆಗೆ ಒಳಪಟ್ಟ ಸಂದರ್ಭದಲ್ಲಿ ಅವರಿಗೆ ಸೋಂಕು ಇಲ್ಲದಿರುವುದು ದೃಢಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.