ಚೆನ್ನೈ: ತಮಿಳಿನ ಜನಪ್ರಿಯ ನಟಇಳಯದಳಪತಿ ವಿಜಯ್ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ‘ಮಾಸ್ಟರ್‘ ಸಿನಿಮಾ ಚಿತ್ರೀಕರಣದ ಸೆಟ್ನಲ್ಲೇ ಬುಧವಾರ ವಿಚಾರಣೆಗೆ ಒಳಪಡಿಸಿದ್ದಾರೆ.

ವಿಜಯ್ ಅಭಿನಯದ ಬಿಗಿಲ್ ಸಿನಿಮಾಬಾಕ್ಸ್ ಆಫೀಸ್ನಲ್ಲಿ ಸೂಪರ್ಹಿಟ್ ಆಗಿತ್ತು. ಈ ಸಿನಿಮಾವನ್ನು ಎಜಿಎಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಈ ಚಿತ್ರಕ್ಕೆ ಸಂಬಂಧಿಸಿದಂತೆ ತೆರಿಗೆ ವಂಚನೆ ಆರೋಪದಡಿಯಲ್ಲಿ ವಿಜಯ್ ಅವರನ್ನು ಐಟಿ ಆಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.ಐಟಿ ಅಧಿಕಾರಿಗಳು ಎಜಿಎಸ್ ಸಂಸ್ಥೆ ಹಾಗೂ ನಿರ್ಮಾಪಕ ಅನ್ಬು ಚೆಯಾನ್ ಅವರ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿದ ಕೆಲ ಗಂಟೆಗಳಲ್ಲಿ ವಿಜಯ್ ಅವರನ್ನು ವಿಚಾರಣೆ ನಡೆಸಿದ್ದಾರೆ.

ನೈವೇಲಿಯಲ್ಲಿ ವಿಜಯ್ ‘ಮಾಸ್ಟರ್‘ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಫೈಟಿಂಗ್ ದೃಶ್ಯದ ಶೂಟಿಂಗ್ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಮೊದಲಿಗೆನೋಟಿಸ್ ನೀಡಿ, ಕೆಲ ಹೊತ್ತು ವಿಚಾರಣೆ ನಡೆಸಿದರು ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ತೆರಿಗೆ ವಂಚನೆ ಆರೋಪದಡಿಯಲ್ಲಿ 2015ರಲ್ಲೂ ವಿಜಯ್ ಅವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.