ನಾವು 5ಜಿ ವಿರುದ್ಧ ಇಲ್ಲ. ಅದನ್ನು ಸ್ವಾಗತಿಸುತ್ತಿದ್ದೇವೆ. ಆದರೆ 5ಜಿ ನೆಟ್‌ವರ್ಕ್ ಬಳಕೆಗೆ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ತಜ್ಞ ಅಧಿಕಾರಿಗಳು ಸಮ್ಮತಿ ಸೂಚಿಸಬೇಕು ಎಂಬುದು ನಮ್ಮ ವಿನಂತಿ ಎಂದು ಜೂಹಿ ಚಾವ್ಲಾ ತಿಳಿಸಿದ್ದಾರೆ.

ಭಾರತದಲ್ಲಿ 5ಜಿ ಅಳವಡಿಕೆ ಬಗ್ಗೆ ಜೂಹಿ ಚಾವ್ಲಾ ಹೂಡಿದ್ದ ಮೊಕದ್ದಮೆಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಇದೊಂದು ಪಬ್ಲಿಸಿಟಿಯ ಭಾಗ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕೋರ್ಟ್ ಅರ್ಜಿದಾರರ ಮೇಲೆ 20 ಲಕ್ಷ ದಂಡ ವಿಧಿಸಿದೆ.

ಒಂದು ದಿನದ ಬಳಿಕ 5ಜಿ ವಿರುದ್ಧ ದಾವೆ ಹೂಡಿದ್ದು ಏಕೆ ಎಂಬುದನ್ನು ಜೂಹ್ಲಿ ಚಾವ್ಲಾ ವಿಡಿಯೊ ಮೂಲಕ ಬಹಿರಂಗ ಪಡಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ, ಅತ್ಯಂತ ಹೆಚ್ಚು ಗದ್ದಲವಿತ್ತು. ನನಗೆ ನನ್ನ ಧ್ವನಿಯೇ ಕೇಳದಷ್ಟು ಗದ್ದಲವಿತ್ತು. ಈ ಗದ್ದಲದಲ್ಲಿ ಪ್ರಮುಖವಾದ ಸಂದೇಶವೇ ಕಳೆದು ಹೋಗಿದೆ ಎಂದು ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.

ಕೆಲಸವಿಲ್ಲದ್ದಕ್ಕೆ ಅರ್ಧದಷ್ಟು ತೆರಿಗೆ ಇನ್ನೂ ಪಾವತಿಸಿಲ್ಲ: ಕಂಗನಾ

ಟೆಲಿಕಾಂ ಇಂಡಷ್ಟ್ರಿ ಭಾರತದಲ್ಲಿ 5ಜಿ ನೆಟ್‌ವರ್ಕ್ ಅಳವಡಿಸಿದರೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ವರ್ಷದ 365 ದಿನಗಳ 24 ಗಂಟೆಗಳ ಕಾಲ ಪ್ರತಿಯೊಬ್ಬ ಮನುಷ್ಯ, ಪ್ರಾಣಿ, ಪಕ್ಷಿ, ಕೀಟ ಮತ್ತು ಭೂಮಿಯಲ್ಲಿರುವ ಸಸ್ಯವರ್ಗ ಈಗಿನ ರೇಡಿಯೇಷನ್‌ಗಿಂತ ನೂರಕ್ಕೂ ಹೆಚ್ಚು ಪಟ್ಟು ರೇಡಿಯೇಷನ್ ನಡುವೆ ಜೀವಿಸಬೇಕಾಗುತ್ತದೆ ಎಂದು ನಟಿ ಜೂಹಿ ಚಾವ್ಲಾ ಸೇರಿದಂತೆ ಮೂವರು ಪರಿಸರ ಪರ ಹೋರಾಟಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಬರ್ಲಿನ್ಗೆ ‘ಬಯಲಾಟದ ಭೀಮಣ್ಣ’

5ಜಿ ನೆಟ್‌ವರ್ಕ್ ಬಳಕೆಗೆ ಎಷ್ಟು ಸುರಕ್ಷಿತ ಎಂಬುದನ್ನು ಅಧ್ಯಯನ ನಡೆಸಿ ವರದಿ ಮಾಡಬೇಕು. ಅದು ಸಾರ್ವಜನಿಕರಿಗೆ ಲಭ್ಯವಿರುವಂತೆ ಮಾಡಬೇಕು. ನಾವೆಲ್ಲರು ನೆಮ್ಮದಿಯಿಂದ ನಿದ್ರಿಸಬೇಕು. 5ಜಿ ನೆಟ್‌ವರ್ಕ್ ಮಕ್ಕಳಿಗೆ, ಗರ್ಭಿಣಿಯರಿಗೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ, ವಯಸ್ಸಾದವರಿಗೆ ಮತ್ತು ಜೀವಸಂಕುಲಕ್ಕೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ವಿಸ್ತೃತ ಅಧ್ಯಯನ ವರದಿ ಬೇಕು. ಅದನ್ನು ನಾವು ಕೇಳುತ್ತಿದ್ದೇವೆ ಎಂದು ಚೂಹಿ ಚಾವ್ಲಾ ವಿಡಿಯೊದಲ್ಲಿ ವಿವರಿಸಿದ್ದಾರೆ.

ನಕಲಿ ಪಿಎಚ್ಡಿ: ಬಾಳ್ ಠಾಕ್ರೆ ಚಿತ್ರ ನಿರ್ಮಾಪಕಿ ಸ್ವಪ್ನಾ ಪಾಟಕರ್ ಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.