ಕೆಜಿಎಫ್–2 ನಂತರ ಯಶ್ ಯಾವ ಸಿನಿಮಾ ಮಾಡುತ್ತಾರೆ? ಅಭಿಮಾನಿಗಳನ್ನು ಬಹಳ ದಿನಗಳಿಂದ ಕಾಡುತ್ತಿರುವ ಪ್ರಶ್ನೆ. ಬಾಲಿವುಡ್ನಲ್ಲಿ ಸಿನಿಮಾ ಮಾಡುತ್ತಾರಂತೆ, ಹಾಲಿವುಡ್ಗೆ ಹಾರುತ್ತಾರಂತೆ ಎಂಬಿತ್ಯಾದಿ ದಿನಕ್ಕೊಂದು ಖಾತ್ರಿಯಲ್ಲದ ಸುದ್ದಿಗಳು ಹೊರಬರುತ್ತಲೇ ಇವೆ. ದೊಡ್ಡ ದೊಡ್ಡ ನಿರ್ದೇಶಕರನ್ನು ಹೆಸರಿಸಿ, ಯಶ್ ಮುಂದಿನ ಸಿನಿಮಾ ಈ ನಿರ್ದೇಶಕರ ಜೊತೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆದರೆ ಆಪ್ತ ಮೂಲಗಳ ಪ್ರಕಾರ ಯಶ್ ಪಾತ್ರ ಯಾವ ಸಿನಿಮಾವನ್ನೂ ಒಪ್ಪಿಕೊಳ್ಳುತ್ತಿಲ್ಲ. ಕೆಜಿಎಫ್ಗಿಂತ ಪ್ರಬಲವಾದ ಸಿನಿಮಾ ನೀಡುವ ಆಲೋಚನೆಯಲ್ಲಿದ್ದಾರೆ. ಆ ರೀತಿಯ ಸ್ಕ್ರಿಪ್ಟ್ಗಾಗಿ ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಯಶ್ ಬಾಲಿವುಡ್ನ ಎರಡು ಅತಿದೊಡ್ಡ ಆಫರ್ಗಳನ್ನು ತಿರಸ್ಕರಿಸಿದ್ದಾರೆ.

ಕೆಜಿಎಫ್–2 ಮುಗಿಯುತ್ತಿದ್ದಂತೆ ಯಶ್ ಕರಣ್ ಜೋಹರ್ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಾರೆಂಬ ಸುದ್ದಿ ಹಬ್ಬಿತ್ತು. ಧರ್ಮ ಪ್ರೊಡಕ್ಷನ್ನಲ್ಲಿ ಮುಂದಿನ ಸಿನಿಮಾ ಎಂಬ ವದಂತಿ ಹಬ್ಬಿತ್ತು. ಆದರೆ ಅವ್ಯಾವುದೂ ಸತ್ಯವಾಗಿಲ್ಲ.

ಬಾಲಿವುಡ್ನ ಎಕ್ಸೆಲ್ ಎಂಟರ್ಟೈನ್ಮೆಂಟ್ ಯಶ್ ಕಾಲ್ಶೀಟ್ಗಾಗಿ ಪ್ರಯತ್ನಿಸಿದೆ. ’ರಂಗ್ ದೆ ಬಸಂತಿ’ ಖ್ಯಾತಿಯ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ ‘ಕರ್ಣ’ ಸಿನಿಮಾಗಾಗಿ ಯಶ್ ಅವರನ್ನು ಮಾತಾಡಿಸಿದೆ. ಆದರೆ ಯಶ್ ಈ ಆಫರ್ ತಿರಸ್ಕರಿಸಿದ್ದಾರೆ.

ರಣ್ಬೀರ್ ಕಪೂರ್ ಬ್ರಹ್ಮಾಸ್ತ್ರ ಇತ್ತೀಚೆಗೆ ಬಿಡುಗಡೆಗೊಂಡ ಬಿಗ್ಬಜೆಟ್ ಸಿನಿಮಾ. ಅದರ ಯಶಸ್ಸಿನ ನಂತರ ಬ್ರಹ್ಮಾಸ್ತ್ರ–2 ಸಿದ್ಧತೆ ನಡೆದಿದೆ. ಇದರಲ್ಲಿನ ಪ್ರಮುಖ ಪಾತ್ರಕ್ಕೆ ಯಶ್ಗೆ ಆಹ್ವಾನ ನೀಡಲಾಗಿತ್ತು. ಆದರೆ ಯಶ್ ಅದನ್ನೂ ತಿರಸ್ಕರಿಸಿದ್ದಾರೆ.

ಯಶ್ ತಮ್ಮ ವೃತ್ತಿ ಕುರಿತು ಬಹಳ ಕ್ಲಾರಿಟಿ ಹೊಂದಿರುವ ನಟ. ಕೆಜಿಎಫ್ ನಂತರ ಅವರ ಚಿತ್ರದ ಕುರಿತು ಜನರ ನಿರೀಕ್ಷೆ ಏನು ಎಂಬುದು ತಿಳಿದಿದೆ. ಹೀಗಾಗಿ ಎಷ್ಟೇ ದೊಡ್ಡ ಬಜೆಟ್ ಇದ್ದರೂ, ಯಾವ ಸ್ಟಾರ್ ಇದ್ದರೂ ಸಾಧಾರಣ ಕಥೆಗಳನ್ನು ಒಪ್ಪುತ್ತಿಲ್ಲ. ತಮಗೊಂದು ಗಟ್ಟಿಯಾದ ಅಸ್ತಿತ್ವವಿಲ್ಲದ ಮಲ್ಟಿ ಸ್ಟಾರ್ಗಳ ಜೊತೆ ತೆರೆ ಹಂಚಿಕೊಳ್ಳುವಂತಹ ಸಾಹಸಕ್ಕೆ ಇಳಿಯುತ್ತಿಲ್ಲ. ಹಾಲಿವುಡ್ನಲ್ಲಿನ ಒಂದಷ್ಟು ತಂತ್ರಜ್ಞರ ಜೊತೆ ಸಂಪರ್ಕದಲ್ಲಿದ್ದು ಮತ್ತೊಂದು ದೊಡ್ಡ ಸಿನಿಮಾದ ಆಲೋಚನೆಯಲ್ಲಿದ್ದಾರೆ ಎನ್ನುತ್ತಿದೆ ಅವರ ಆಪ್ತ ವಲಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.