1980ರ ಕಾಲದಲ್ಲಿ ನಟ ಚಿರಂಜೀವಿ ಮೆಗಾಸ್ಟಾರ್ ಎನ್ನಿಸಿಕೊಂಡಾಗ ಅಲ್ಲು ಅರವಿಂದ್ ತಾನು ಮೆಗಾ ನಿರ್ಮಾಪಕ ಆಗಬೇಕು ಎಂದುಕೊಂಡವರು. ಇಂತಿಪ್ಪ ಅಲ್ಲು ಅರವಿಂದ್ ಚಿರಂಜೀವಿ ಮಗ ರಾಮ್ ಚರಣ್ ಹಾಗೂ ಅಳಿಯ ಸಾಯಿ ಧರ್ಮ ತೇಜರಿಗಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಆದರೆ ಅರವಿಂದ್ ನಟ ವರುಣ್ ತೇಜ್ಗಾಗಿ ಯಾವುದೇ ಸಿನಿಮಾ ನಿರ್ಮಾಣ ಮಾಡಿಲ್ಲ. ಈ ನಡುವೆ ಸ್ಟಾರ್ ನಿರ್ಮಾಪಕ ಪ್ರಸ್ತುತ ಚಿತ್ರರಂಗದ ವ್ಯವಹಾರಗಳ ಬಗ್ಗೆ ಅರಿಯುವ ಸಲುವಾಗಿ ಕೆಲ ಕಾಲ ನಿರ್ಮಾಣದಿಂದ ಬಿಡುವು ಪಡೆದುಕೊಂಡಿದ್ದರು.

ಈಗ ಮತ್ತೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ಅಲ್ಲು ಅರವಿಂದ್ ಸಾಯಿ ಧರ್ಮ ತೇಜಗಾಗಿ ಇನ್ನೊಂದು ಸಿನಿಮಾ ಮಾಡುತ್ತಿರುದಾಗಿ ಘೋಷಿಸಿದ್ದಾರೆ. ಈ ಹಿಂದೆ ಪಿಲ್ಲಾ ನುವ್ವು ಲೇನಿ ಜೀವಿತಂ ಎಂಬ ಸಿನಿಮಾದಲ್ಲಿ ಈ ಜೋಡಿ ಒಟ್ಟಾಗಿ ಕೆಲಸ ಮಾಡಿತ್ತು. ಇದರೊಂದಿಗೆ ವರುಣ್ ತೇಜರೊಂದಿಗೆ ಸಿನಿಮಾ ಮಾಡುವ ಯೋಜನೆಯೂ ಇವರ ಮನಸ್ಸಿನಲ್ಲಿದೆ. ಇದರೊಂದಿಗೆ ಮೆಗಾಸ್ಟಾರ್ ಚಿರಂಜೀವಿ ಸಿನಿಮಾವೊಂದಕ್ಕೆ ನಿರ್ಮಾಣ ಮಾಡುವ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನುತ್ತಿದೆ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.