ಪ್ರಿಯಾ ಪ್ರಕಾಶ್ ಕಣ್ಣು ಹೊಡೆದ ದೃಶ್ಯಕ್ಕೆ ಬೇಸ್ತು ಬಿದ್ದವರಲ್ಲಿ ತೆಲುಗಿನ ನಟ ಅಲ್ಲು ಅರ್ಜುನ್ ಅವರೂ ಒಬ್ಬರು! ‘ಒರು ಅಡಾರ್ ಲವ್’ನಲ್ಲಿ ಕಣ್ಣು ಮಿಟುಕಿಸುವ ವಿಡಿಯೊವನ್ನು ಅರ್ಜುನ್ ನೋಡಿದ್ದರಂತೆ. ಅಂತಹ ಬೆಡಗಿಯನ್ನು ನೋಡಿ ಮಾತನಾಡಿಸಲಿಕ್ಕೆಂದೇ ಆ ಸಮಾರಂಭಕ್ಕೆ ಅವರು ಹೋಗಿದ್ದರಂತೆ!

ಹೀಗೆ, ತಮ್ಮ ಮನದ ಮಾತನ್ನು ಹೇಳಿಕೊಂಡವರು ಸ್ವತಃ ಅಲ್ಲು ಅರ್ಜುನ್. ’ಒರು ಅಡಾರ್ ಲವ್‘ನ ತೆಲುಗು ರೀಮೇಕ್ ’ಲವರ್ಸ್ ಡೇ‘ಯ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಅವರು ಆ ರಹಸ್ಯವನ್ನು ಬಿಚ್ಚಿಟ್ಟರು. ಸಮಾರಂಭ ನಡೆದುದು ಹೈದರಾಬಾದ್ನಲ್ಲಿ.

’ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದೇಕೆ?‘ ಎಂಬ ಪ್ರಶ್ನೆ ಜಗತ್ತಿನಾದ್ಯಂತ ವೈರಲ್ ಆದ ಕಾರಣ ಬಾಹುಬಲಿ ದಿ ಕನ್ಕ್ಲೂಷನ್ ಸಿನಿಮಾ ಕೇವಲ ಹತ್ತು ದಿನದಲ್ಲಿ ಸಾವಿರ ಕೋಟಿ ಗಳಿಕೆ ಸಾಧಿಸಲು ಸಾಧ್ಯವಾಯಿತು. ಪ್ರಿಯಾ ಪ್ರಕಾಶ್ ಅವರು ಕಣ್ಣು ಮಿಟುಕಿಸುವ ವೈರಲ್ ವಿಡಿಯೊದ ಪರಿಣಾಮವಾಗಿ ’ಲವರ್ಸ್ ಡೇ‘ ಕೂಡಾ ಹಾಗೇ ಯಶಸ್ಸು ಗಳಿಸುತ್ತದೆ‘ ಎಂದು ಅಲ್ಲು ಅರ್ಜುನ್ ಹೇಳಿದರು.

’ನನಗೆ ಪ್ರೇಮಿಗಳ ದಿನ ಎಂದರೆ ಮನಸ್ಸಿಗೆ ಬಹಳ ಹತ್ತಿರ. ನಾನು 14 ವಯಸ್ಸಿನವನಿದ್ದಾಗ ಫೆಬ್ರುವರಿ 14 ಲವರ್ಸ್ ಡೇ ಎಂದು ಯಾರೋ ಹೇಳಿದ್ದರು. ಅವತ್ತಿನಿಂದಲೂ ನಾನು ಪ್ರೇಮಿಗಳ ದಿನವನ್ನು ಆಚರಿಸುತ್ತಾ ಬಂದಿದ್ದೇನೆ. ಲವರ್ಸ್ ಡೇ ಎಂದರೆ ನನ್ನ ಜನ್ಮ ದಿನಕ್ಕಿಂತಲೂ ಹೆಚ್ಚಿನ ಕಾತರದ ದಿನ‘ ಎಂದು ಹೇಳಿ ಅಲ್ಲು ಚಪ್ಪಾಳೆ ಗಿಟ್ಟಿಸಿಕೊಂಡರು.

ಶಾಲಾ ಕ್ಯಾಂಪಸ್ನಲ್ಲಿ ನಡೆಯುವ ಹದಿಹರೆಯದ ಪ್ರೇಮ ಪ್ರಕರಣವನ್ನು ಆಧರಿಸಿ ಒಮರ್ ಲುಲು ನಿರ್ದೇಶಿಸಿರುವ ಚಿತ್ರ ’ಒರು ಅಡಾರ್ ಲವ್‘. ಫೆಬ್ರುವರಿ 14ರಂದು ಕನ್ನಡವೂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಅದು ಬಿಡುಗಡೆಯಾಗಲಿದೆ. ಪ್ರಿಯಾ ಪ್ರಕಾಶ್ಗೆ ಜೋಡಿಯಾಗಿ ರೋಷನ್ ಅಬ್ದುಲ್ ರವೂಫ್ ನಟಿಸಿದ್ದಾರೆ. ನೂರಿನ್ ಶೆರೀಫ್, ಸೈಯದ್ ಶಾಜಹಾನ್ ಮತ್ತು ಮಿಷೆಲ್ ಆ್ಯನ್ ಡೇನಿಯೆಲ್ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.