ಬೆಂಗಳೂರು: ನಟ ಅಂಬರೀಷ್ ನಿಧನರಾಗಿ (2018 ನವೆಂಬರ್ 24) ಇಂದಿಗೆ 4 ವರ್ಷಗಳು ಕಳೆದಿವೆ. ಅಭಿಮಾನಿಗಳು, ಆಪ್ತರು ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಷ್ ಅವರ ಸಮಾಧಿಗೆ ತೆರಳಿ ನೆಚ್ಚಿನ ಅಂಬಿ ಅವರನ್ನು ಸ್ಮರಿಸುತ್ತಿದ್ದಾರೆ.

ಮಂಡ್ಯ ಸೇರಿದಂತೆ ಅನೇಕ ಕಡೆ ಅಂಬರೀಷ್ ಭಾವಚಿತ್ರಕ್ಕೆ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ಇನ್ನು ಅಂಬರೀಷ್ ಪತ್ನಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಭಾವನಾತ್ಮಕ ಸಂದೇಶ ಹಾಕಿ, ಪತಿಯನ್ನು ಸ್ಮರಿಸಿದ್ದಾರೆ.

ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ನಿಮ್ಮ ಪುಣ್ಯಸ್ಮರಣೆಗೆ ನನ್ನ ಹೃದಯಂತರಾಳದ ನಮನ.
'ಅಂಬಿ ಅಮರ' ಎಂದು ಟ್ವಿಟ್ಮಾಡಿದ್ದಾರೆ.

1952ರ ಮೇ 29ರಂದು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮದಲ್ಲಿ ಜನಿಸಿದ ಅಂಬರೀಷ್ ಅವರ ಹುಟ್ಟು ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್. ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ 1972 ರಲ್ಲಿ ಅಂಬರೀಶ್, ವಿಷ್ಣುವರ್ಧನ್ ಜತೆಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಆ ನಂತರ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.

ರೆಬೆಲ್ ಸ್ಟಾರ್, ಮಂಡ್ಯದ ಗಂಡು ಎಂದು ಕರೆಸಿಕೊಂಡಿದ್ದ ಅಂಬರೀಷ್ ರಾಜಕಾರಣದಲ್ಲೂ ಸಕ್ರಿಯರಾಗಿದ್ದರು. ಮೇ 2013ರಿಂದ ಜೂನ್ 2016ರವರೆಗೆ ವಸತಿ ಸಚಿವರಾಗಿದ್ದರು. ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ಗೂ ಪಾತ್ರರಾಗಿದ್ದರು.

24 ನವೆಂಬರ್ 2018 ರಂದು ಬೆಂಗಳೂರಿನಲ್ಲಿ ಹೃದಯ ಸಮಸ್ಯೆಯಿಂದ ನಿಧನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.