ಸೂರಜ್ ವೆಂಜರಮೂಡು ಹಾಗೂ ಸೌಬಿನ್ ಶಹಿರ್ ಅಪ್ಪ–ಮಗನಾಗಿ ಕಾಣಿಸಿಕೊಂಡಿರುವ ಮಲಯಾಳಂ ಸಿನಿಮಾ ‘ಆ್ಯಂಡ್ರಾಯಿಡ್ ಕುಂಜಪ್ಪನ್ ವರ್ಷನ್ 5.25’ ಟ್ರೇಲರ್ ನಗಿಸುವಲ್ಲಿ ಸಫಲವಾಗಿದೆ.

ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು.

ಆಧುನಿಕ ತಂತ್ರಜ್ಞಾನವನ್ನು ಧಿಕ್ಕರಿಸಿ ಬದುವ ಅಪ್ಪನಿಗೆ, ಸದಾ ಅವುಗಳ ಬಗ್ಗೆಯೇ ಚಿಂತಿಸುವ ಮಗ. ಮಿಕ್ಸರ್ ಅನ್ನೇ ಬಳಸದ ಅಪ್ಪನಿಗೆ ಮಗ ರೋಬೋಟ್ ತಂದು ಕೊಟ್ಟರೆ ಆಗುವ ಪಜೀತಿಗಳನ್ನು ಈ ಟ್ರೇಲರ್ ಚಿತ್ರಿಸುತ್ತದೆ.

ಅಪ್ಪ ಮಗನ ಸುತ್ತಲೇ ಸುತ್ತುವ ಈ ಕಥೆಯನ್ನು ಹಾಸ್ಯಭರಿತವಾಗಿ ಹೇಳುವ ಪ್ರಯತ್ನವನ್ನು ನಿರ್ದೇಶಕ ರತೀಶ್ ಬಾಲಕೃಷ್ಣನ್ ಮಾಡಿದ್ದಾರೆ. ಟ್ರೇಲರ್ ಅನ್ನು ಈಗಾಗಲೇ ಸಾಕಷ್ಟು ಮಂದಿ ವೀಕ್ಷಿಸಿದ್ದು, 41 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

ಈ ಸಿನಿಮಾವನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.