ಪ್ರಾಣಿಗಳ ಮೇಲಿನ ಕ್ರೌರ್ಯದ ವಿರುದ್ಧ ಬಾಲಿವುಡ್ ನಟಿ ಅನುಷ್ಕಾ ಶರ್ಮಾ #ಪ್ರಾಣಿಗಳಿಗೂ ನ್ಯಾಯ (#JusticeForAnimals) ಆಂದೋಲನವನ್ನು ಆರಂಭಿಸಿದ್ದು, ಪ್ರಾಣಿ ಸಂರಕ್ಷಣಾ ಕಾನೂನುಗಳು ಇನ್ನೂ ಬಿಗಿಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಾಣಿಗಳ ಮೇಲಿನ ಹಿಂಸೆ ಬಗ್ಗೆ ನಟಿ ಧ್ವನಿ ಎತ್ತಿದ್ದು, ಕಾನೂನುಗಳು ಬಿಗಿಯಾಗಬೇಕು, ಆರೋಪಿಗಳಿಗೆ ಶಿಕ್ಷೆಯಾಗಬೇಕು, ಪ್ರಾಣಿಗಳ ಮೇಲಿನ ಹಿಂಸೆಯನ್ನು ನಿಷೇಧಿಸುವಂತಹ ಕಾನೂನುಗಳು ಜಾರಿಯಾಗಬೇಕು ಎಂದು ಗುಡುಗಿದ್ದಾರೆ.

ಈಚೆಗೆ ಮುಂಬೈನ ವರ್ಲಿ ಎಂಬಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಕಟ್ಟಡದ ಕೆಳಗೆ ನಿಂತಿದ್ದ ‘ಲಕ್ಕಿ’ ಎಂಬ ಬೀದಿನಾಯಿಯನ್ನು ಅಲ್ಲಿದ್ದ ವಾಚ್‌ಮನ್ ಅಟ್ಟಾಡಿಸಿ ಹೊಡೆದಿದ್ದ. ಕೊನೆಗೆ ಆ ನಾಯಿ ಪ್ರಾಣ ಬಿಟ್ಟಿತ್ತು. ಈ ಘಟನೆಯನ್ನು ನಟಿ ಸೋನಂ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಘಟನೆಯಿಂದ ನೊಂದ ನಟಿ ಅನುಷ್ಕಾಈ ಆಂದೋಲನವನ್ನು ಆರಂಭಿಸಿದ್ದಾರೆ. ಈಗ ಜಾರಿಯಲ್ಲಿರುವ ಕಾನೂನುಗಳಲ್ಲಿಪ್ರಾಣಿಗೆ ಹಿಂಸೆ ಮಾಡಿದ ವ್ಯಕ್ತಿಗೆ ಬರಿ ₹10ರಿಂದ ₹100 ರವರೆಗೆ ದಂಡ ವಿಧಿಸಲಾಗುತ್ತದೆ. ಆ ಕಾನೂನುಗಳು ಪ್ರಾಣಿಗಳ ಹಕ್ಕನ್ನು ರಕ್ಷಣೆ ಮಾಡುತ್ತಿಲ್ಲ. ಹಾಗಾಗಿ ಕಾನೂನನ್ನು ಬದಲಾಯಿಸಬೇಕು ಎಂದಿದ್ದಾರೆ

ಈ ಜಗತ್ತು ಬರೀ ಮನುಷ್ಯರಿಗಷ್ಟೇ ಅಲ್ಲ, ಈ ಭೂಮಿಯ ಮೇಲಿನ ಎಲ್ಲಾ ಪ್ರಾಣಿ, ಪಕ್ಷಿ, ಮನುಷ್ಯರು ಸಮಾನರು. ಎಲ್ಲರಿಗೂ ಬದುಕುವ ಹಕ್ಕಿದೆ. ಮನುಷ್ಯರ ವಿರುದ್ಧ ಹಿಂಸೆ ನಡೆದರೆ ಅವರು ಹೋರಾಟ ಮಾಡಿ ನ್ಯಾಯ ಪಡೆಯುತ್ತಾರೆ. ಹಾಗೇ ಪ್ರಾಣಿಗಳಿಗೂ ಹಕ್ಕು ಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.