ಹೈದರಾಬಾದ್: ಆಂಧ್ರಪ್ರದೇಶ ಸರ್ಕಾರವು 'ಸೂಪರ್ ಹೈ ಬಜೆಟ್ ಫಿಲ್ಮ್ ಕೆಟಗರಿ' ಅಡಿಯಲ್ಲಿ 10 ದಿನಗಳ ಅವಧಿಗೆ ನಟ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ‘ಸರ್ಕಾರು ವಾರಿ ಪಾಟ’ ಸಿನಿಮಾದ ಟಿಕೆಟ್ ದರವನ್ನು ಹೆಚ್ಚಿಸಿದೆ. ಇದು ಸದ್ಯ ಜಾರಿಯಲ್ಲಿರುವ ಟಿಕೆಟ್ ದರಕ್ಕಿಂತ ₹ 45 ನಷ್ಟು ಹೆಚ್ಚಾಗಿದೆ.

ಆಂಧ್ರಪ್ರದೇಶದಲ್ಲಿ ಚಲನಚಿತ್ರ ಟಿಕೆಟ್ ದರಗಳ ಹೆಚ್ಚಳವು ಬಹಳ ಹಿಂದಿನಿಂದಲೂ ವಿವಾದದ ಮೂಲವಾಗಿದೆ.

ಆಂಧ್ರಪ್ರದೇಶದಲ್ಲಿನ ಸಿನಿಮಾಟೋಗ್ರಫಿ ಕಾಯ್ದೆಗಳಿಗೆ ಇತ್ತೀಚಿನ ತಿದ್ದುಪಡಿಗಳಲ್ಲಿ ಬಜೆಟ್ಗೆ ಅನುಗುಣವಾಗಿ ಬೆಲೆಗಳನ್ನು ಹೆಚ್ಚಿಸಲಾಗುವುದು ಅಥವಾ ಕಡಿಮೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಅದೇ ರೀತಿಯಲ್ಲಿ, ಸರ್ಕಾರವು ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ನಿಗದಿಯಾಗಿದ್ದ ಮೂಲ ಬೆಲೆಗೆ ₹ 45 ಹೆಚ್ಚಳಕ್ಕೆ ಅನುಮತಿ ನೀಡಿದೆ.

ಇದನ್ನೂ ಓದಿ:ಸರ್ಕಾರು ವಾರಿ ಪಾಟ ಟ್ರೈಲರ್ ಬಿಡುಗಡೆ: ಕುತೂಹಲ ಮೂಡಿಸಿದ ಮಹೇಶ್ ಬಾಬು

ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಅಭಿನಯದ ‘ಸರ್ಕಾರು ವಾರಿ ಪಾಟ’ ಈಗಾಗಲೇ ಅಮೆರಿಕದಲ್ಲಿ 223 ಸ್ಥಳಗಳಲ್ಲಿ 648 ಪ್ರದರ್ಶನದ ಪ್ರೀ ಬುಕ್ಕಿಂಗ್ನಲ್ಲಿ 1.45 ಕೋಟಿ (188,564 ಡಾಲರ್) ಹಣವನ್ನು ಪಡೆದಿದೆ.

ಮೇ 12 ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ಪರಶುರಾಮ್ ಪೆಟ್ಲ ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.