ನ್ಯೂಜೆರ್ಸಿ: ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಹವಾ ಅಮೆರಿಕದಲ್ಲೂ ಜೋರಾಗಿದೆ. ನ್ಯೂಜೆರ್ಸಿಯಲ್ಲಿರುವ ಅಪ್ಪು ಅಭಿಮಾನಿಗಳು ಅಪ್ಪು ಅವರ ಹುಟ್ಟುಹಬ್ಬ ಮತ್ತು ‘ಜೇಮ್ಸ್’ ಬಿಡುಗಡೆಯನ್ನು ವಿಶಿಷ್ಟವಾಗಿ ಸಂಭ್ರಮಿಸಲು ನಿರ್ಧರಿಸಿದ್ದಾರೆ.

ಶನಿವಾರ(ಮಾರ್ಚ್ 19)ದಂದು 250 ಜನರು ನೂರು ಕಾರುಗಳಲ್ಲಿ ರ್ಯಾಲಿ ಮಾಡುವ ಮೂಲಕ ‘ಅಪ್ಪು ಜಾತ್ರೆ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಮಧ್ಯಾಹ್ನ 2.30ಕ್ಕೆ ನಾರ್ತ್ ಬುನ್ಸ್ವಿಕ್ನಲ್ಲಿ ’ರೇಗಲ್ ಸಿನಿಮಾಸ್’ನಲ್ಲಿ ತಮ್ಮ ನೆಚ್ಚಿನ ನಟನ ಕೊನೆಯ ಚಿತ್ರವನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ.

ಅಮೆರಿಕದ ವಿವಿಧೆಡೆ ನೆಲೆಸಿರುವ ಅಪ್ಪು ಅಭಿಮಾನಿಗಳೂ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.