ಕಳೆದ ಹಲವು ವರ್ಷಗಳಿಂದಲೂ ಅರ್ಜುನ್ ಕಪೂರ್ ಅವರ ಲವ್ ಲೈಫ್ ಬಗ್ಗೆ ಚರ್ಚೆಗಳಾಗುತ್ತಲೇ ಇವೆ. ಅವರ ಗೆಳತಿ ನಟಿ ಮಲೈಕಾ ಅರೋರಾ ಮತ್ತು ಅವರ ನಡುವಿನ ವಯಸ್ಸಿನ ಅಂತರವೇ ಇದಕ್ಕೆಲ್ಲ ಕಾರಣ. 36 ವರ್ಷದ ಅರ್ಜುನ್ ಮತ್ತು 48 ವರ್ಷದ ಮಲೈಕಾ 2016ರಿಂದಲೂ ರಿಲೇಷನ್‌ಶಿಪ್‌ನಲ್ಲಿದ್ದಾರೆ.

ಇದೀಗ ತಮ್ಮ ವಯಸ್ಸಿನ ಅಂತವನ್ನಿಟ್ಟುಕೊಂಡು ಟ್ರೋಲ್ ಮಾಡುವವರಿಗೆಲ್ಲ ಅರ್ಜುನ್ ಕಪೂರ್ ಚಾಟಿ ಬೀಸಿದ್ದಾರೆ. ವಯಸ್ಸಿನ ಆಧಾರದ ಮೇಲೆ 'ಸಂಬಂಧವನ್ನು ಸಂದರ್ಭೋಚಿತಗೊಳಿಸುವುದು' 'ಅವಿವೇಕದ ಆಲೋಚನಾ ಪ್ರಕ್ರಿಯೆ' ಎಂದಿದ್ದಾರೆ.

ಮಸಾಲಾ.ಕಾಮ್ ಜೊತೆಗೆ ಮಾತನಾಡಿರುವ ಅವರು, 'ಮೊದಲನೆಯದಾಗಿ, ಜನರಿಂದ ಬರುವ ಕಾಮೆಂಟ್‌ಗಳನ್ನು ಮಾಧ್ಯಮಗಳು ಪರಿಗಣಿಸುತ್ತವೆ. ಆದರೆ, ಅವುಗಳಲ್ಗಿ ಶೇ 90ರಷ್ಟು ಕಂಟೆಂಟ್‌ಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದೇ ಇಲ್ಲ. ಟ್ರೋಲಿಂಗ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ. ಏಕೆಂದರೆ ಅವೆಲ್ಲ ನಕಲಿ. ಅದೇ ಜನರು ನನ್ನನ್ನು ಭೇಟಿಯಾದಾಗ ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಸಾಯುತ್ತಾರೆ. ಹಾಗಾಗಿ, ಅಂತಹವರ ಮಾತುಗಳನ್ನು ನಂಬಲು ಸಾಧ್ಯವಿಲ್ಲ' ಎಂದಿದ್ದಾರೆ.

'ವೈಯಕ್ತಿಕ ಜೀವನದಲ್ಲಿ ನಾನು ಏನನ್ನು ಮಾಡುತ್ತೇನೆ ಎನ್ನುವುದು ನನಗಿರುವ ಅಧಿಕಾರ. ಯಾವಾಗ ನನ್ನ ಕೆಲಸವನ್ನು ಗುರುತಿಸಲಾಗುತ್ತದೆಯೋ ಆಗ ಉಳಿದವುಗಳೆಲ್ಲವೂ ಗದ್ದಲ ಎನಿಸಿಕೊಳ್ಳುತ್ತವೆ. ಜೊತೆಗೆ, ಯಾರ ವಯಸ್ಸು ಎಷ್ಟು ಎನ್ನುವ ಬಗ್ಗೆ ನೀವು ತುಂಬಾ ತಲೆಕೆಡಿಸಿಕೊಳ್ಳಬಾರದು. ಇದು ನಮ್ಮ ಜೀವನ, ಇಲ್ಲಿ ನಾವು ಬದುಕಬೇಕು. ಹಾಗಾಗಿ ಬದುಕಲು ಮತ್ತು ಮುಂದುವರಿಯಲು ಬಿಡಿ. ವಯಸ್ಸನ್ನು ನೋಡುವುದು ಮತ್ತು ಸಂಬಂಧವನ್ನು ಸಂದರ್ಭೋಚಿತಗೊಳಿಸುವುದು ಮೂರ್ಖತನದ ಚಿಂತನೆಯ ಪ್ರಕ್ರಿಯೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಒಟ್ಟಾಗಿ ಹೊಸ ವರ್ಷಾಚರಣೆಯನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮಲೈಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮೂಲಕ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದರು. ಇತ್ತೀಚೆಗಷ್ಟೇ ಅರ್ಜುನ್ ಕಪೂರ್ ಅವರಿಗೆ ಕೋವಿಡ್-19 ದೃಢಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.