ಮುಂಬೈ: ಆಶುತೋಷ್ ಗೊವಾರಿಕರ್ ನಿರ್ದೇಶನದ ಬಹುತಾರಾಗಣದ‘ಪಾಣಿಪತ್’ ಹಿಂದಿಸಿನಿಮಾದಟ್ರೇಲರ್ ಬಿಡುಗಡೆಯಾಗಿದ್ದು ಯುಟ್ಯೂಬ್ನಲ್ಲಿ ಟಾಪ್ಟ್ರೆಂಡಿಂಗ್ ಆಗಿದೆ.

ಚಿತ್ರತಂಡನವೆಂಬರ್ 4 ರಂದುಟ್ರೇಲರ್ ಬಿಡುಗಡೆ ಮಾಡಿತ್ತು. ಇಲ್ಲಿಯವರೆಗೂ ಸುಮಾರು1.95 ಕೋಟಿ ಜನರು ಟ್ರೇಲರ್ ವೀಕ್ಷಣೆ ಮಾಡಿರುವುದು ದಾಖಲೆಯಾಗಿದೆ. 4.8 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು 65 ಸಾವಿರ ಜನ ಕಮೆಂಟ್ಗಳನ್ನು ಹಾಕಿದ್ದಾರೆ.

ಈ ಚಿತ್ರದ ನಾಯಕ ಅರ್ಜುನ್ ಕಪೂರ್, ಸದಾಶಿವ ರಾವ್ ಭಾವು ಪಾತ್ರದಲ್ಲಿ,ನಾಯಕಿಯಾಗಿರುವಕೃತಿ ಸೇನನ್ ಅವರುಪಾರ್ವತಿ ಬಾಯಿ ಪಾತ್ರದಲ್ಲಿ ನಟಿಸಿದ್ದಾರೆ. ನಟ ಸಂಜಯ್ ದತ್ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ.

ಚಿತ್ರವು ಮೂರನೇ ಪಾಣಿಪತ್ ಕದನದಸನ್ನಿವೇಶಗಳ ಕಥಾಹಂದರ ಹೊಂದಿದೆ. ಚಿತ್ರ ಬಹುತೇಕ ಪೂರ್ಣಗೊಂಡಿದ್ದು,ಇದೇ ಡಿಸೆಂಬರ್ 6ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

2016ರಲ್ಲಿ ‘ಮೊಹೆಂಜೊ ದಾರೊ’ ಚಿತ್ರವನ್ನು ನಿರ್ದೇಶಿಸಿದ್ದಆಶುತೋಷ್, ಮತ್ತೊಮ್ಮೆಐತಿಹಾಸಿಕ ಚಿತ್ರ ನಿರ್ದೇಶನ ಮಾಡಿದ್ದಾರೆ.ಮರಾಠರ ಶೌರ್ಯವನ್ನು ಅವರುತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.