ಅಶುತೋಷ್ ರಾಣಾ ಬಹುಭಾಷಾ ನಟ. ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಅನೇಕ ಭಾರತೀಯ ಭಾಷೆಯ ಸಿನಿಮಾಗಳಲ್ಲಿ ತಮ್ಮ ನಟನೆಯ ಛಾಪು ತೋರಿದ್ದಾರೆ. ಖಳನಟನಾಗಿಯೇ ತೆರೆ ಮೇಲೆ ಹೆಚ್ಚು ಮಿಂಚಿದ್ದ ಇವರು ಚಂದನವನದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದು ‘ಕ್ಷಣ ಕ್ಷಣ’ ಸಿನಿಮಾದಲ್ಲಿ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಈ ಸಿನಿಮಾ 2007ರಲ್ಲಿ ಬಿಡುಗಡೆಯಾಗಿತ್ತು.

ಇವರು ಈಗ ಮತ್ತೆ ಚಂದನವನಕ್ಕೆ ಮರಳಲಿದ್ದಾರೆ. ಶರಣ್ ಅಭಿನಯದ ಹಾಸ್ಯಮಿಶ್ರಿತ ಹಾರರ್ ಸಿನಿಮಾ ‘ಅವತಾರ್ ಪುರುಷ’ದಲ್ಲಿ ಅಶುತೋಷ್ ಖಳನಾಯಕನಾಗಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಶುತೋಷ್ ನಟನೆಯ ಭಾಗವನ್ನು ಚಿತ್ರತಂಡ ಇತ್ತೀಚೆಗೆ ರಾಜಸ್ಥಾನದಲ್ಲಿ ಚಿತ್ರೀಕರಿಸಿತ್ತು.

ಚಿತ್ರದಲ್ಲಿ ಅಶುತೋಷ್ ಅವರದ್ದು ಧರ್ಕಾ ಎಂಬ ಮಾಂತ್ರಿಕನ ಪಾತ್ರ. ಚಿತ್ರದಲ್ಲಿ ಅವರು ಮುಖ್ಯ ಖಳನಾಯಕ. ಅವರು ವಾಮಾಚಾರವನ್ನು ಕಲಿಸುವ ಗುರುವಾಗಿಯೂ ಕಾಣಿಸಲಿದ್ದಾರೆ.

ಮೊದಲು ಈ ಕಥೆಯನ್ನು ವೆಬ್‌ಸಿರೀಸ್ ಮಾಡಬೇಕು ಎಂದು ಯೋಚಿಸಿದ್ದರು ನಿರ್ದೇಶಕರು. ಆದರೆ ನಂತರ ಒಂದಿಷ್ಟು ಬದಲಾವಣೆಗಳನ್ನು ಮಾಡಿ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರದಲ್ಲಿ ಧರ್ಕಾ ಪಾತ್ರ ಎರಡನೇ ಭಾಗದಲ್ಲಿ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.