ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ, ದಿವಂಗತ ಪುನೀತ್ ರಾಜ್ಕುಮಾರ್ ಅವರಿಗೆ ಇಂದು (ಭಾನುವಾರ) 49ನೇ ಹುಟ್ಟುಹಬ್ಬ.

‘ಹುಟ್ಟುಹಬ್ಬದ ಸವಿ ನೆನಪಿನಲ್ಲಿ ಎಂದೆಂದಿಗೂ ನಮ್ಮ ಹೃದಯದಲ್ಲಿ ಅಪ್ಪು ನೆಲೆಸಿದ್ದಾರೆ’ ಎಂದು ಅಶ್ವಿನಿ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
.ಪಠ್ಯಪುಸ್ತಕವಾಗಿ ಪುನೀತ್ ರಾಜ್ಕುಮಾರ್ ಬಾಲ್ಯ.ನೋಡಿ: ಕನ್ನಡದ ಕೋಟ್ಯಾಧಿಪತಿಯಲ್ಲಿ ಸೋತವರಿಗೂ ಚೆಕ್ ಕೊಡುತ್ತಿದ್ದ ಪುನೀತ್ .
‘ಅಪ್ಪು ಅವರು ತಮ್ಮ ಅಪ್ರತಿಮ ಪ್ರತಿಭೆ, ಕರುಣೆ ಮತ್ತು ಮಾನವೀಯತೆಯ ಮೌಲ್ಯಗಳಿಂದ ನಮ್ಮ ಹೃದಯದ ಅಂತರಾಳವನ್ನು ಸದಾ ಬೆಳಗಿಸುತ್ತಲೇ ಇದ್ದಾರೆ. ಪುನೀತ್ ರಾಜ್ಕುಮಾರ್ ಅವರು ಮಾನವೀಯತೆಯ ಮೌಲ್ಯಗಳ ಮೇಲೆ ಇರಿಸಿದ್ದ ಅಚಲ ನಂಬಿಕೆ, ಅವರ ಹಾದಿಯಲ್ಲಿ ನಡೆಯಲು ನಮಗೆ ಸದಾ ಸ್ಫೂರ್ತಿದಾಯಕವಾಗಿರುತ್ತದೆ' ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.

1975 ಮಾರ್ಚ್ 17ರಂದು ಡಾ. ರಾಜ್ಕುಮಾರ್ ಹಾಗೂ ಪಾರ್ವತಮ್ಮ ದಂಪತಿಯ ಮೂರನೇ ಮಗನಾಗಿ ಪುನೀತ್ ಜನಿಸಿದ್ದರು.

‘ಬೆಟ್ಟದ ಹೂವು’ ಚಿತ್ರದ ರಾಮು ಪಾತ್ರಕ್ಕಾಗಿ ಪುನೀತ್ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಬಾಲನಟನಾಗಿ ಬೆಳ್ಳಿತೆರೆ ಪ್ರವೇಶಿಸಿದ್ದ ಪುನೀತ್, 2002ರಲ್ಲಿ ‘ಅಪ್ಪು’ ಸಿನಿಮಾ ಮೂಲಕ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು.
.ಕರ್ನಾಟಕ ರತ್ನ ಪುನೀತ್: ಮಾಸ್ಟರ್ ಲೋಹಿತ್ ಇಂದ 'ಪವರ್ ಸ್ಟಾರ್'ವರೆಗಿನ ಪಯಣ.
ನಟನಾಗಿ, ಗಾಯಕನಾಗಿ ಗುರುತಿಸಿಕೊಂಡಿದ್ದ ಪುನೀತ್ ‘ಪಿಆರ್ಕೆ ಪ್ರೊಡಕ್ಷನ್’ ಹೆಸರಿನ ಸಂಸ್ಥೆಯಡಿಯಲ್ಲಿ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರು.

2021 ಅಕ್ಟೋಬರ್ 29ರಂದು ಅಪಾರ ಅಭಿಮಾನಿ ಬಳಗ ಹಾಗೂ ಕುಟುಂಬಸ್ಥರನ್ನು ‘ಅಪ್ಪು’ ಅಗಲಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.