ನಿರ್ದೇಶಕಸಿಂಪಲ್ ಸುನಿ ಆ್ಯಕ್ಷನ್ ಕಟ್ ಹೇಳಿರುವ, ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಚುಟು–ಚುಟು’ ಜೋಡಿಯ ‘ಅವತಾರ ಪುರುಷ’ ಸಿನಿಮಾ ಮೇ 6ಕ್ಕೆ ಬಿಡುಗಡೆಯಾಗುತ್ತಿದ್ದು, ಚಿತ್ರದ ಟ್ರೇಲರ್ ಅನ್ನು ಆ್ಯಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಸೋಮವಾರ ಬಿಡುಗಡೆ ಮಾಡಿದರು.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಧ್ರುವ ಸರ್ಜಾ, ‘ಈ ಸಿನಿಮಾ ಬಿಡುಗಡೆಯಾದ ಬಳಿಕ ‘ಸಿಂಪಲ್’ ಸುನಿ, ‘ಅವತಾರ್’ ಸುನಿಯಾಗಿ ಬದಲಾಗಲಿದ್ದಾರೆ. ಶರಣ್ ಅವರನ್ನು ನೋಡಿದ ತಕ್ಷಣ, ನನಗೆ ನನ್ನ ಪತ್ನಿ ನೆನಪಾಗುತ್ತಾಳೆ. ಏಕೆಂದರೆ, ಕಾಲೇಜು ದಿನಗಳಲ್ಲಿ ಬಂಕ್ ಹೊಡೆದು ನನ್ನನ್ನು ಎಳೆದುಕೊಂಡು ಶರಣ್ ಅವರ ಸಿನಿಮಾಗಳಿಗೆ ಕರೆದೊಯ್ಯುತ್ತಿದ್ದಳು. ‘ವಿಕ್ಟರಿ’, ‘ಅಧ್ಯಕ್ಷ’ ಹೀಗೆ ಹಲವು ಸಿನಿಮಾಗಳನ್ನು ಒಟ್ಟಿಗೆ ನೋಡಿದ್ದೇವೆ. ‘ಅವತಾರ ಪುರುಷ’ದಲ್ಲಿ ಚುಟು–ಚುಟು ಜೋಡಿ ಮತ್ತೆ ಒಂದಾಗುತ್ತಿದೆ. ಮತ್ತೊಂದು ದಾಖಲೆಯನ್ನು ಈ ಜೋಡಿ ಬರೆಯಲಿದೆ. ನಿರ್ದೇಶಕ ಸುನಿ ಮತ್ತು ಶರಣ್ ಕಾಂಬಿನೇಷನ್ ಖಂಡಿತವಾಗಿಯೂ ಪ್ರೇಕ್ಷಕರಿಗೆ ನಗುವಿನ ರಸದೌತಣ ಬಡಿಸಲಿದೆ’ ಎಂದರು.

‘ಎಲ್ಲ ಭಾಷೆಯ ಚಿತ್ರಗಳನ್ನು ನೋಡಿ. ಸಿನಿಮಾ ಬಿಡುಗಡೆಯಾದಾಗ, ನಾನು ಅವರ ಅಭಿಮಾನಿ ಇವರ ಸಿನಿಮಾ ನೋಡಲ್ಲ ಎನ್ನುವುದನ್ನು ಬಿಡಿ. ಕನ್ನಡ ಸಿನಿಮಾ ಯಾವುದೇ ಆಗಲಿ ನೋಡಿ’ ಎಂದು ಅಭಿಮಾನಿಗಳಿಗೆ ಧ್ರುವ ಕಿವಿಮಾತು ಹೇಳಿದರು.

ನಟ ಶರಣ್ ಮಾತನಾಡಿ, ‘ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಾನು ನಟಿಸಿದ್ದು, ಸಾಯಿಕುಮಾರ್ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ‘ಅವತಾರ ಪುರುಷ’ ಸಿನಿಮಾ ಮುಖಾಂತರ ಇದು ನನಸಾಗಿದೆ. ಚಿತ್ರ ಜೀವನಕ್ಕೆ ಸಿಕ್ಕ ಸಾರ್ಥಕತೆ ಇದು’ ಎಂದರು.

‘ಕಾಮಿಡಿ ಬಹಳ ಕಷ್ಟ. ಈ ಜಾನರ್‌ನಲ್ಲಿ ಶರಣ್ ಅದ್ಭುತ ನಟ. ಇಡೀ ಸಿನಿಮಾದಲ್ಲಿ ಹೊಸತನ ಕಾಣುತ್ತಿದೆ. ಬಾಹುಬಲಿಗೆ ಕಟ್ಟಪ್ಪ, ಕೆ.ಜಿ.ಎಫ್‌ಗೆ ಅಯ್ಯಪ್ಪ ಎಂದು ಜನ ಕೊಂಡಾಡುತ್ತಿದ್ದಾರೆ. ನನ್ನ ತಮ್ಮ ಅಯ್ಯಪ್ಪ ಈ ಸಿನಿಮಾದಲ್ಲಿ ನನ್ನ ತಂದೆಯ ಪಾತ್ರ ಮಾಡಿದ್ದಾನೆ’ ಎಂದು ನಟ ಸಾಯಿಕುಮಾರ್ ಚಿತ್ರದ ಕುರಿತು ವಿವರಣೆ ನೀಡಿದರು.

‘ಪುಷ್ಕರ್‌ಗಾಗಿ ಸಿನಿಮಾ ಗೆಲ್ಲಬೇಕು’: ‘ಕಳೆದ ಮೂರೂವರೆ ವರ್ಷದ ಪಯಣ ಇದು. ನಿರ್ಮಾಪಕರಾದ ಪುಷ್ಕರ ಅವರು ಯಾವುದೇ ವಿಷಯದಲ್ಲಿ ರಾಜಿ ಆಗಿಲ್ಲ. ಚಿತ್ರ ಅದ್ಭುತವಾಗಿ ಮೂಡಿಬರಲು ಅವರಿಗೆ ಸಿನಿಮಾ ಮೇಲಿರುವ ಪ್ರೀತಿಯೇ ಕಾರಣ. ಪುಷ್ಕರ ಅವರಿಗಾಗಿಯಾದರೂ ಈ ಸಿನಿಮಾ ಗೆಲ್ಲಬೇಕು. ಇಂಥ ನಿರ್ಮಾಪಕರು ಚಿತ್ರರಂಗಕ್ಕೆ ಅಗತ್ಯ’ ಎಂದರು ಸುನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.