ಕಳೆದ ವಾರ ಕರಾಚಿ ಹೋಗಿ ಮದುವೆಯೊಂದರಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಬಂದಿರುವ ಪಂಜಾಬಿ ಗಾಯಕ ಮಿಕಾ ಸಿಂಗ್‌ಗೆ ನಿಷೇಧದ ಬಿಸಿ ತಾಗಿದೆ. ಅದರ ಕಾವು ಬಾಲಿವುಡ್ ‘ಬ್ಯಾಡ್ ಬಾಯ್’ ಸಲ್ಮಾನ್ ಖಾನ್‌ಗೂ ತಾಗುವ ಲಕ್ಷಣಗಳು ಕಾಣುತ್ತಿವೆ.

ಅಖಿಲ ಭಾರತ ಸಿನಿಮಾ ಕಾರ್ಮಿಕರ ಸಂಘ ಮತ್ತು ಪಶ್ಚಿಮ ಭಾರತ ಸಿನಿಮಾ ಉದ್ಯೋಗಿಗಳ ಒಕ್ಕೂಟ ಮಿಕಾಗೆ ನಿಷೇಧ ಹೇರಿವೆ. ಅವರೊಂದಿಗೆ ಕೆಲಸ ಮಾಡದಂತೆ ಸಿನಿಮಾ ತಂತ್ರಜ್ಞರು, ನಟರು, ಕಾರ್ಮಿಕರು, ಸಂಗೀತ ಕಲಾವಿದರಿಗೆ ತಾಕೀತು ಮಾಡಿವೆ.

‘ಇಲಿ ಪೆಟ್ಟು ಗಣಪಗೆ’ ಎಂಬಂತೆಮಿಕಾ ಸಿಂಗ್ ಮೇಲಿನ ನಿಷೇಧ ನಟ ಸಲ್ಮಾನ್‌ನನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ.

ಕಾರಣ ಇಷ್ಟೇ, ಅಮೆರಿಕದ ಹ್ಯೂಸ್ಟನ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಮತ್ತು ಮಿಕಾ ಭಾಗವಹಿಸುತ್ತಿದ್ದಾರೆ. ಇದು ಸಲ್ಮಾನ್‌ನನ್ನು ಸಂದಿಗ್ಧಕ್ಕೆ ದೂಡಿದೆ. ಮಿಕಾ ಜತೆ ವೇದಿಕೆ ಹಂಚಿಕೊಂಡರೆ ತನಗೂ ಎಲ್ಲಿ ನಿಷೇಧದ ಬಿಸಿ ತಾಗುತ್ತದೆಯೋ ಎಂದು ಚಿಂತಿಸಿ ಸಲ್ಲು ಮಿಯಾನ ತಲೆಯೂ ಬಿಸಿಯಾಗಿದೆಯಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.