ಸಸ್ಯಾಹಾರವನ್ನು ಉತ್ತೇಜಿಸುವ ಸಲುವಾಗಿಪ್ರಾಣಿದಯಾ ಸಂಘವು(ಪೇಟಾ)ಪ್ರತಿ ವರ್ಷ‘ಅತ್ಯಂತ ಸುಂದರ ಸಸ್ಯಾಹಾರಿ‘ ಎಂಬ ಪ್ರಶಸ್ತಿಯನ್ನುಪ್ರಸಿದ್ಧ ವ್ಯಕ್ತಿಗಳಿಗೆನೀಡುತ್ತದೆ.

ಈ ವರ್ಷದ(2021) ಪ್ರಶಸ್ತಿಯುಬಾಲಿವುಡ್ ತಾರೆಗಳಾದಭೂಮಿ ಪಡ್ನೆಕರ್ ಮತ್ತು ಅಕ್ಷಯ್ ಕುಮಾರ್ ಅವರ ಪಾಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಪೇಟಾ ಇಂಡಿಯಾ, ‘ಅಕ್ಷಯ್ಕುಮಾರ್ ಮತ್ತು ಭೂಮಿ ಪಡ್ನೆಕರ್ ಅವರು2021ರ ಅತ್ಯಂತ ಸುಂದರಸಸ್ಯಾಹಾರಿ ಪ್ರಶಸ್ತಿವಿಜೇತರು’ ಎಂದು ಘೋಷಿಸಿದೆ.

ಪ್ರಶಸ್ತಿ ಘೋಷಿಸಿರುವ ಪೇಟಾ ಇಂಡಿಯಾಗೆ ನಟಿಭೂಮಿ ಫಡ್ನೆಕರ್ ಧನ್ಯವಾದ ತಿಳಿಸಿದ್ದಾರೆ.

ಬಾಲಿವುಡ್ನ ಅತ್ಯಂತ ಫಿಟ್ ಸೆಲೆಬ್ರಿಟಿಗಳಲ್ಲಿ ಅಕ್ಷಯ್ ಕುಮಾರ್ ಒಬ್ಬರಾಗಿದ್ದಾರೆ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಸ್ಯಾಹಾರಿ ಆಹಾರವನ್ನು ಅವಲಂಬಿಸಿದ್ದಾರೆ. ಅವರು ಪ್ರಾಣಿ ಪ್ರೇಮಿಯೂ ಆಗಿದ್ದಾರೆ. ಪ್ರಾಣಿ ಹಿಂಸೆಯನ್ನು ಖಂಡಿಸಿ ಹಲವು ಬಾರಿ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿರುವ ನಟಿ ಭೂಮಿ ಪಡ್ನೆಕರ್ ಪರಿಸರ ಕಾರ್ಯಕರ್ತೆಯೂ ಹೌದು. ನಟನೆಯ ಜೊತೆಗೆ ‘ಕ್ಲೈಮೆಟ್ ವಾರಿಯರ್’ ಎಂಬ ಸ್ವಯಂಸೇವಾ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಪರಿಸರ ಸಂರಕ್ಷಣೆ ಮಾಡುವುದೇ ಈ ಸಂಸ್ಥೆಯ ಮೂಲ ಗುರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.