ಚಂದನ್ ಶೆಟ್ಟಿ-ನಿವೇದಿತಾ ಗೌಡ ಮೊದಲಬಾರಿಗೆ ಜೊತೆಯಾಗಿ ‘ಕ್ಯಾಂಡಿ ಕ್ರಷ್’ ಚಿತ್ರದಲ್ಲಿ ಅಭಿನಯಿಸಿದ್ದು ಗೊತ್ತೇ ಇದೆ. ಈ ಜೋಡಿ ವೈಯಕ್ತಿಕ ಜೀವನದಲ್ಲಿ ಜೊತೆಯಾಗಿದ್ದಾಗ ಒಪ್ಪಿಕೊಂಡಿದ್ದ ಚಿತ್ರವಿದು. ಇದೀಗ ಚಿತ್ರದ ಶೀರ್ಷಿಕೆ ‘ಮುದ್ದು ರಾಕ್ಷಸಿ’ ಎಂದು ಬದಲಾಗಿದೆ. ಪುನೀತ್ ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸೈಕೋಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಿದು.

‘ಚಿತ್ರದ ಹೆಸರು ಬದಲಾವಣೆಗೂ ಚಂದನ್ ಶೆಟ್ಟಿ–ನಿವೇದಿತಾ ವೈಯಕ್ತಿಕ ಬದುಕಿನ ಘಟನೆಗಳಿಗೂ ಯಾವುದೇ ಸಂಬಂಧವಿಲ್ಲ. ‘ಕ್ಯಾಂಡಿ ಕ್ರಷ್’ ಎಂಬ ಹೆಸರಿನ ಕಂಪನಿಯೊಂದು ಶೀರ್ಷಿಕೆ ಬದಲಿಸುವಂತೆ ನಮಗೆ ನೊಟೀಸ್ ನೀಡಿತ್ತು. ನಾವು ಕಂಪನಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದೆವು. ಆದರೆ ಒಪ್ಪಲಿಲ್ಲ. ಹೀಗಾಗಿ ಶೀರ್ಷಿಕೆ ಬದಲಿಸಿದ್ದೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ ಚಿತ್ರದ ನಿರ್ದೇಶಕ ಪುನೀತ್.

ಶ್ರೀಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ಚಿತ್ರವನ್ನು ನಿರ್ಮಿಸಿದ್ದಾರೆ. ‘ಚಂದನ್–ನಿವೇದಿತಾ ವಿಚ್ಛೇದನದ ನಂತರವೂ ಲವ್ ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ಇಬ್ಬರೂ ಈ ವಿಚಾರದಲ್ಲಿ ತುಂಬ ವೃತ್ತಿಪರತೆ ಹೊಂದಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಇನ್ನು 5 ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ’ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಎಂ.ಎಸ್.ತ್ಯಾಗರಾಜ್ ಸಂಗೀತ, ಎ.ಕರುಣಾಕರ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.