ಕಿರುತೆರೆ ಧಾರವಾಹಿ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ ಸಂಗೀತಾ ಶೃಂಗೇರಿ, ಮಾಡೆಲ್ ಕೂಡ ಹೌದು. ಫಿಟ್ನೆಸ್ ಬಗ್ಗೆ ಹೆಚ್ಚು ಗಮನಕೊಡುವ ಅವರು ಸಾಮಾಜಿಕ ಮಾಧ್ಯಮದಲ್ಲಿ ವರ್ಕೌಟ್ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ನಟಿಯ ಈ ವಿಡಿಯೊಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

‘ಚಾರ್ಲಿ’ ಚಿತ್ರದ ಮೂಲಕ ಗಮನ ಸೆಳೆದಿದ್ದ ಸಂಗೀತಾ ಶೃಂಗೇರಿ ಮೊದಲಿಗೆ ಕಾಣಿಸಿಕೊಂಡಿದ್ದು ‘ಹರ ಹರ ಮಹದೇವ’ ಧಾರವಾಹಿಯ ‘ಸತಿ’ ಪಾತ್ರದಲ್ಲಿ. ಮೂಲತಃ ಮಾಡೆಲ್ ಆಗಿರುವ ಸಂಗೀತಾ 2014ರಲ್ಲಿ ನಡೆದ ‘ಫೆಮಿನಾ ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದರು. 2018ರಲ್ಲಿ ‘ಎ+’ ಚಿತ್ರದ ಮೂಲಕ ದೊಡ್ಡ ಪರದೆಗೆ ಪದಾರ್ಪಣೆ ಮಾಡಿದ್ದರು.

2022ರಲ್ಲಿ ತೆರೆಕಂಡ ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ’ ಚಿತ್ರ ಸಂಗೀತಾ ಅವರ ಸಿನಿ ಬದುಕಿಗೆ ದೊಡ್ಡ ಬ್ರೇಕ್ ನೀಡಿತ್ತು. ಅದಾದ ಬಳಿಕ ಸಿನಿಮಾದಲ್ಲಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ.

ಸಿನಿಮಾದಿಂದ ದೂರವಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಸಂಗೀತಾ ಸದಾ ಸಕ್ರಿಯರಾಗಿರುತ್ತಿದ್ದರು. ವಿಭಿನ್ನ ಉಡುಪಿನಲ್ಲಿ ಕಂಗೊಳಿಸುವ ಅವರು ಆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದರು. ಇದೀಗ ವರ್ಕೌಟ್ ವಿಡಿಯೊವನ್ನು ಹಂಚಿಕೊಂಡಿದ್ದು, 9 ವಾರಗಳ ಟ್ರಾನ್ಸ್‌ಫಾರ್ಮೆಶನ್ ಚಾಲೆಂಜ್ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಫಿಟ್ನೆಸ್ ಚಾಲೆಂಜ್ ತೆಗೆದುಕೊಳ್ಳದ್ದಕ್ಕಿಂತ ಮೊದಲು ಮತ್ತು ನಂತರ ದೇಹದಲ್ಲಿ ಹೇಗೆಲ್ಲ ಬದಲಾವಣೆಗಳಾಗಿವೆ ಎಂದು ಎರಡು ನಿಮಿಷಗಳ ವಿಡಿಯೊದಲ್ಲಿ ತಿಳಿಸಿದ್ದಾರೆ. ನಟಿಯ ಟ್ರಾನ್ಸ್‌ಫಾರ್ಮೇಶನ್ ವಿಡಿಯೊಗೆ ಹಲವರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ.

ಸದ್ಯ ಸಂಗೀತಾ ಅವರು ತಮ್ಮ ಹೊಸ ಚಿತ್ರ ‘ಮಾರಿಗೋಲ್ಡ್’ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.