ನವದೆಹಲಿ: ಈ ತಿಂಗಳ ಆರಂಭದಲ್ಲಿ ರೋಹ್ಮನ್ ಶಾಲ್ಜೊತೆ ಬ್ರೇಕಪ್ ಆಗಿರುವುದಾಗಿ ಘೋಷಿಸಿದ್ದ ಬಾಲಿವುಡ್ ನಟಿ ಸುಶ್ಮಿತಾ ಸೇನ್, ಸ್ನೇಹಿತರಾಗಿ ಮುಂದುವರಿಯುವುದಾಗಿ ಹೇಳಿದ್ದರು. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲೂ ಪೋಸ್ಟ್ ಮಾಡಿರುವ ಅವರು, ನಮ್ಮ ನಡುವಿನ ಸಂಬಂಧ ಮುಗಿದಿದೆ. ಆದರೆ, ಸ್ನೇಹ ಮುಂದುವರಿದಿದೆ ಎಂದು ಬರೆದುಕೊಂಡಿದ್ದಾರೆ.

ಈ ಕುರಿತಂತೆ ಹಿಂದೂಸ್ಥಾನ್ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿರುವ ಅವರು,‘ನಮ್ಮ ಸಂಬಂಧದ ಅಂತ್ಯವು ಇಬ್ಬರಿಗೂ ಅತ್ಯಂತ ಮುಖ್ಯವಾದುದ್ದಾಗಿದೆ. ಆ ಮೂಲಕ ನಾವುಗಳು ನಮ್ಮ ಜೀವನದಲ್ಲಿ ಮುಂದುವರಿಯಬಹುದು. ನಮ್ಮ ಸ್ನೇಹ ಯಾವಾಗಲೂ ಇರುತ್ತದೆ. ಈ ವಯಸ್ಸಿನಲ್ಲಿ ಕುಳಿತು ನನ್ನ ಜೀವನದಲ್ಲಿ ಆದ ಭಯಾನಕ ವಿಷಯದ ಬಗ್ಗೆ ಯೋಚಿಸಲು ಪ್ರಾರಂಭಿಸಿದರೆ, ನಿಜವಾಗಿಯೂ ನನ್ನ ಜೀವನ ವ್ಯರ್ಥವಾಗಿದೆ. ನಾನು ಪ್ರತಿಯೊಂದು ಸಂಬಂಧದಿಂದಲೂ ಕಲಿತಿದ್ದೇನೆ. ಆದ್ದರಿಂದ, ನಮ್ಮ ಸತ್ಯದ ಬಗ್ಗೆ ಮಾತನಾಡಲು ಸಾಧ್ಯವಾಗುವುದು ಸುಂದರವಾದ ವಿಷಯ’ಎಂದು ಅವರು ಹೇಳಿದರು.

‘ಪ್ರೀತಿಯಲ್ಲಿರುವಾಗ ಅದಕ್ಕೆ ನಾನು 100% ಆದ್ಯತೆಕೊಡುತ್ತೇನೆ. ಹಾಗಾಗಿ, ಅದರಿಂದ
ಹೊರಗೆ ಬರುವಾಗಲೂ 100% ಇರಬೇಕು. ಸತ್ಯವು ಅತ್ಯಂತ ಮಹತ್ವವಾದದ್ದು. ಏಕೆಂದರೆ ಇದು ಜನರು ಸ್ನೇಹಿತರಾಗಿ ಉಳಿಯಲು ಮತ್ತು ಪರಸ್ಪರ ಒಳ್ಳೆಯವರಾಗಿರಲು ಅನುವು ಮಾಡಿಕೊಡುತ್ತದೆ. ಜಗತ್ತಿಗೆ ಆ ಪ್ರೀತಿಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಸುಶ್ಮಿತಾ ಸೇನ್ ಅವರು ಆರ್ಯ ಎಂಬ ವೆಬ್-ಸರಣಿಯೊಂದಿಗೆ ಕಮ್‌ಬ್ಯಾಕ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.