ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಎನ್.ಟಿ.ರಾಮರಾವ್ ಅವರ ಜೀವನಚರಿತ್ರೆಯನ್ನಾಧರಿಸಿದ ಸಿನಿಮಾದಲ್ಲಿ ನಟಿ ಶ್ರೀದೇವಿ ಅವರ ಪಾತ್ರಕ್ಕೆ ಕೊನೆಗೂ ರಕುಲ್ ಪ್ರೀತ್ ಸಿಂಗ್ ಹೆಸರು ಅಂತಿಮಗೊಂಡಿದೆ.

ನಂಡಮೂರಿ ತಾರಕ ರಾಮ ರಾವ್ (ಎನ್.ಟಿ.ಆರ್.) ಅವರೊಂದಿಗೆ 14 ಸಿನಿಮಾಗಳಲ್ಲಿಶ್ರೀದೇವಿ ನಟಿಸಿದ್ದರು. ಈ ಪಾತ್ರವನ್ನು ಕಂಗನಾ ರನೋಟ್ ಮಾಡಲಿದ್ದಾರೆ ಎಂದು ಸುದ್ದಿಯಾದ ಬೆನ್ನಲ್ಲೇ ಶ್ರದ್ಧಾ ಕಪೂರ್ ಹೆಸರು ಕೇಳಿಬಂದಿತ್ತು. ಆದರೆ ಇದೀಗ ರಕುಲ್ ಈ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಂಗನಾ ಮತ್ತು ಶ್ರದ್ಧಾ ಅವರಿಗಿಂತ ರಕುಲ್ ಅವರಲ್ಲಿ ಶ್ರೀದೇವಿ ಹೋಲಿಕೆ ಹೆಚ್ಚು ಇರುವುದು ಈ ಆಯ್ಕೆಗೆ ಮುಖ್ಯ ಕಾರಣ ಎನ್ನಲಾಗಿದೆ.

‘ಕಂಗನಾ, ಶ್ರದ್ಧಾ ಅಥವಾ ಸೋನಾಕ್ಷಿ ಸಿನ್ಹಾ ಅವರೊಂದಿಗೆ ಈ ಪಾತ್ರದ ಸಂಬಂಧ ಮಾತುಕತೆ ನಡೆಸಿಯೇ ಇಲ್ಲ. ತೆಲುಗಿನಲ್ಲಿ ನಮ್ಮ ಆಯ್ಕೆ ಏನಿದ್ದರೂ ರಕುಲ್ ಪ್ರೀತ್ ಮಾತ್ರ. ಚಿತ್ರದ ಚಿತ್ರೀಕರಣ ಶೇ 30ರಷ್ಟು ಮುಗಿದಿದೆ.ವಿದ್ಯಾ ಬಾಲನ್, ಎನ್‌ಟಿಆರ್ ಪತ್ನಿಯ ಪಾತ್ರ ಮಾಡುತ್ತಿದ್ದು, ಆರು ದಿನ ಸತತ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ರಕುಲ್ ಚಿತ್ರೀಕರಣದ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ’ ಎಂದು ಚಿತ್ರದ ನಿರ್ಮಾಪಕ ವಿಷ್ಣು ಇಂಡುರಿ ಹೇಳಿದ್ದಾರೆ.

ಇದೇ ವೇಳೆ, ರಾನಾ ದಗ್ಗುಬಾಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.