‘ಮುನಿರತ್ನ ಕುರುಕ್ಷೇತ್ರ’ ದರ್ಶನ್ ನಟನೆಯ 50ನೇ ಚಿತ್ರ. ಇದರಲ್ಲಿ ಅವರದು ದುರ್ಯೋಧನನ ಪಾತ್ರ. ಕನ್ನಡದಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾಗಳ ಪರಂಪರೆ ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲಿ ಇದು ಹೊಸ ಸಂಚಲನ ಸೃಷ್ಟಿಸಿರುವುದು ದಿಟ.

3ಡಿ ರೂಪದಲ್ಲಿ ತೆರೆಕಂಡಿರುವ ಈ ಚಿತ್ರಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಸಭಾಂಗಣದಲ್ಲಿ ‘ನನ್ನ ಪ್ರಕಾರ’ ಸಿನಿಮಾ ಆಡಿಯೊ ಬಿಡುಗಡೆಗೆ ಆಗಮಿಸಿದ್ದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಮತ್ತೆ ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾಗಳ ಬಗ್ಗೆ ಮಾತನಾಡಿದರು.

70 ಅಥವಾ 80ರ ದಶಕದಲ್ಲಿ ಕುರುಕ್ಷೇತ್ರ ಸಿನಿಮಾ ನಿರ್ಮಾಣಗೊಂಡಿದ್ದರೆ ನಿಮ್ಮ ಪ್ರಕಾರ ದುರ್ಯೋಧನನ ಪಾತ್ರದಲ್ಲಿ ಯಾರು ನಟಿಸಬೇಕಿತ್ತು ಎಂಬ ಪ್ರಶ್ನೆ ದರ್ಶನ್ಗೆ ಎದುರಾಯಿತು. ‘ವರನಟ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ದಿಗ್ಗಜ. ದುರ್ಯೋಧನನ ಪಾತ್ರಕ್ಕೆ ಅವರೇ ಸೂಕ್ತ. ಅವರೇ ಆ ಪಾತ್ರದಲ್ಲಿ ನಟಿಸುತ್ತಿದ್ದರು’ ಎಂದು ಥಟ್ಟನೆ ಹೇಳಿದರು ದರ್ಶನ್.

‘ಪೌರಾಣಿಕ ಸಿನಿಮಾ ಮಾಡಲು ನಿರ್ಮಾಪಕರು ಮನಸ್ಸು ಮಾಡಬೇಕು. ಇನ್ಮೆಲೆ ಮದಕರಿ ನಾಯಕ’ ತೆರೆಯ ಮೇಲೆ ಬರುತ್ತಾರೆ ಎಂದು ಹೇಳಿದರು.

ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ‘ಗಂಡುಗಲಿ ಮದಕರಿ ನಾಯಕ’ ಚಿತ್ರದಲ್ಲಿ ದರ್ಶನ್ ಅವರು ಮದಕರಿ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.