ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮಂಗಳವಾರ 44ನೇ ಜನ್ಮದಿನದ ಸಂಭ್ರಮ. ಜೊತೆಗೆ ಮಾ.11ರಂದು ತೆರೆಯ ಮೇಲೆ ಬರಲು ಸಿದ್ಧವಾಗಿರುವ ಬಹುನಿರೀಕ್ಷೆಯ ‘ರಾಬರ್ಟ್’ ಚಿತ್ರದ ಟ್ರೇಲರ್ ಬಿಡುಗಡೆಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದ ಡಿಬಾಸ್ ಅಭಿಮಾನಿಗಳಿಗೆ ಈ ಬಾರಿ ನಿರಾಸೆಯಾಗಿದೆ.

ಕೋವಿಡ್–19 ಕಾರಣದಿಂದ ಸಾರ್ವಜನಿಕವಾಗಿ ಜನ್ಮದಿನದ ಸಂಭ್ರಮವನ್ನು ಆಚರಿಸಲು ದರ್ಶನ್ ಹಿಂದೇಟು ಹಾಕಿದ್ದಾರೆ. ಹೀಗಾಗಿ ದರ್ಶನ್ ಮನೆ ಮುಂಭಾಗದಲ್ಲಿ ಈ ಹಿಂದೆ ಕಂಡುಬರುತ್ತಿದ್ದ ಅಭಿಮಾನಿಗಳ ಜನಸಾಗರ ಈ ವರ್ಷ ಕಂಡುಬಂದಿಲ್ಲ. ದರ್ಶನ್ ಮನೆ ಮುಂಭಾಗದಲ್ಲಿ ಈ ಕುರಿತು ಬ್ಯಾನರ್ ಹಾಕಲಾಗಿದ್ದು, ‘ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ. ಕೊರೊನಾ ವೈರಸ್ ಇರುವುದರಿಂದ ಈ ವರ್ಷ ಹುಟ್ಟುಹಬ್ಬದ ಸಂಭ್ರಮಾಚರಣೆ ಬೇಡ ಎಂದು ನಿರ್ಧರಿಸಿದ್ದೇನೆ. ನಾನು ಊರಿನಲ್ಲಿ ಇರುವುದಿಲ್ಲ. ದೂರದ ಊರುಗಳಿಂದ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಬರುತ್ತಿದ್ದ ನಲ್ಮೆಯ ಅಭಿಮಾನಿಗಳಿಗೆ ಈ ಸೂಚನೆ.. ಯಾರೂ ಮನೆಯ ಹತ್ತಿರ ಬಂದು ನಿರಾಶರಾಗಬೇಡಿ. ದಯಮಾಡಿ ನನ್ನ ಈ ಕೋರಿಕೆಯನ್ನು ಈಡೇರಿಸಿಕೊಡಿ’ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ಹೀಗಿದ್ದರೂ, ದೂರದ ಊರುಗಳಿಂದ ಕೆಲ ಅಭಿಮಾನಿಗಳು ದರ್ಶನ್ ನಿವಾಸದ ಮುಂದೆ ಬಂದು ಕಾಯುತ್ತಿದ್ದ ದೃಶ್ಯ ಮಂಗಳವಾರ ಕಂಡುಬಂತು.

ಟ್ವಿಟರ್ನಲ್ಲಿ ಟ್ರೆಂಡಿಂಗ್

ಸಾರ್ವಜನಿಕವಾಗಿ ಜನ್ಮದಿನಾಚರಣೆಗೆ ಸ್ವತಃ ದರ್ಶನ್ ಅವರೇ ಬ್ರೇಕ್ ಹಾಕಿರುವ ಕಾರಣ, ಸಾಮಾಜಿಕ ಜಾಲತಾಣಗಳ ಮೂಲಕವೇ ಲಕ್ಷಾಂತರ ಜನರು ಶುಭಾಶಯ ಕೋರಿದ್ದಾರೆ. ಟ್ವಿಟರ್ನಲ್ಲಿ #RobertTrailer ಹಾಗೂ #HBDChallengingStarDarshan ಎಂಬುವುದು ಟ್ರೆಂಡಿಂಗ್ನಲ್ಲಿದೆ. ಜೊತೆಗೆ ದರ್ಶನ್ ಅಭಿಮಾನಿಗಳೆಲ್ಲರೂ ತಮ್ಮ ಪ್ರೊಫೈಲ್ ಚಿತ್ರದಲ್ಲಿ ಕಾಮನ್ ಡಿಪಿ ಹಾಕಿಕೊಂಡಿದ್ದು, ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ನಟ ಪುನೀತ್ ರಾಜ್ಕುಮಾರ್, ನೆನಪಿರಲಿ ಪ್ರೇಮ್ ಸೇರಿದಂತೆ ನೂರಾರು ನಟ, ನಟಿಯರು ಶುಭಹಾರೈಸಿದ್ದಾರೆ. ಸಚಿವರಾದ ಬಿ.ಶ್ರೀರಾಮುಲು, ಡಾ.ಕೆ.ಸುಧಾಕರ್, ಬಿಜೆಪಿ ನಾಯಕ ವಿಜಯೇಂದ್ರ ಯಡಿಯೂರಪ್ಪ ಸೇರಿದಂತೆ ರಾಜಕೀಯ ನಾಯಕರಿಂದಲೂ ಶುಭಹಾರೈಕೆಗಳು ಟ್ವಿಟರ್ನಲ್ಲಿ ಬಂದಿವೆ.

ರಾಬರ್ಟ್ ಟ್ರೇಲರ್ ಹವಾ

‘ನನ್ನನ್ನು ಸಂಹಾರ ಮಾಡಬೇಕೂಂತ ಬರೋನು ನನಗಿಂತ ದೊಡ್ಡ ಕ್ರಿಮಿನಲ್ ಆಗಿರಬೇಕು, ನನಗಿಂತ ಟೆರರ್ ಆಗಿರಬೇಕು...ನನಗಿಂತ ವಾಯ್ಲೆಂಟ್ ಆಗಿರಬೇಕು...ಹೀಗೆ ಜಬರ್ದಸ್ತ್ ಡೈಲಾಗ್ಗಳ ಮೂಲಕ ರಾಬರ್ಟ್ ಟ್ರೇಲರ್ ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದೆ. ಟ್ರೇಲರ್ನಲ್ಲೇ ಡಿಬಾಸ್ ಅಭಿಮಾನಿಗಳಿಗೆ ಚಿತ್ರದಲ್ಲಿನ ಆ್ಯಕ್ಷನ್ನ ಝಲಕ್ ಅನ್ನು ದರ್ಶನ್ ನೀಡಿದ್ದಾರೆ. ಜಗಪತಿ ಬಾಬು ಖಳನಾಯಕರಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ‘ಮಾಸ್’ಗೇ ‘ಬಾಸ್’ ಆಗಿ ದರ್ಶನ್ ಮಿಂಚಿದ್ದಾರೆ. ಟ್ರೇಲರ್ನಲ್ಲೇ ಮಾಸ್ ಪಂಚ್ ಡೈಲಾಗ್ಗಳ ಮೂಲಕ ಎಂಟ್ರಿ ಕೊಡುವ ಚಾಲೆಂಜಿಂಗ್ ಸ್ಟಾರ್, ‘ಕೌಂಟ್ಡೌನ್ ಸ್ಟಾರ್ಟ್ಸ್ ನೌ’ ಎಂದಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ಮಾ.11ರಂದು ಚಿತ್ರವು ತೆರೆ ಮೇಲೆ ಬರಲಿದೆ. ಟ್ರೇಲರ್ ಕೇವಲ ಎರಡು ಗಂಟೆಯಲ್ಲಿ 4.88 ಲಕ್ಷ ವ್ಯೂವ್ಸ್ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.