ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ವರ್ಷವೂ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನೆರೆದವರ ಕೇಂದ್ರ ಬಿಂದುವಾದರು. ನಿತ್ಯವೂ ಒಂದಿಲ್ಲೊಂದು ವಿನೂತನ ಉಡುಗೆಗಳಲ್ಲಿ ಗಮನ ಸೆಳೆದ ದೀಪಿಕಾ ಗಿಳಿ ಹಸಿರು ಬಣ್ಣದ ಉಡುಪಿನಲ್ಲಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು.

ಉದ್ದನೆಯ ಹಸಿರು ಬಣ್ಣದ ಉಡುಪಿನಲ್ಲಿ ಮಿಂಚಿದ್ದ ದೀಪಿಕಾ, ಅಮುಲ್ ಡೈರಿ ಬ್ರ್ಯಾಂಡ್ಗೂ ಜಾಹೀರಾತಿನ ವಿಷಯವಾಗಿದ್ದು ಹೊಸ ಸುದ್ದಿ. ಪ್ರಚಲಿತ ಸಮಸ್ಯೆಗಳು ಮತ್ತು ಸುದ್ದಿಗಳನ್ನೇ ವಿಷಯವಾಗಿಟ್ಟುಕೊಂಡು ತನ್ನ ಉತ್ಪನ್ನಗಳ ಜಾಹೀರಾತು ರೂಪಿಸುವ ಅಮುಲ್. ದೀಪಿಕಾಳಂತೆಯೇ ಹಸಿರು ಉಡುಪು ತೊಟ್ಟ ಮುದ್ದು ಅಮುಲ್ ಹುಡುಗಿಯ ಚಿತ್ರ ರೂಪಿಸಿದೆ. ಐಶ್ವರ್ಯಾ ರೈ ಧರಿಸಿದ್ದ ಬಂಗಾರದ ಬಣ್ಣದ ಉಡುಪು ತೊಟ್ಟ ಮತ್ತೊಬ್ಬ ಮುದ್ದುಮುಖದ ಅಮುಲ್ ಬೇಬಿಯೂ ಚಿತ್ರದಲ್ಲಿರುವುದು ವಿಶೇಷ.

ಐಶ್ವರ್ಯಾ ರೈ ಮತ್ತು ದೀಪಿಕಾ ಪಡುಕೋಣೆ ಹೀಗೆ ಇಬ್ಬರು ನಟಿಯರ ವೇಷ ತೊಟ್ಟ ಅಮುಲ್ ಬೇಬಿಗಳು ನೋಡಲು ಮುದ್ದು ಮುದ್ದಾಗಿವೆ. ಕೈಯಲ್ಲಿ ಅಮುಲ್ ಚೀಸ್ ಇಟ್ಟುಕೊಂಡು ಪೋಸ್ ನೀಡಿರುವ ಈ ಬೇಬಿಗಳ ಚಿತ್ರಗಳ ಮೇಲೆ ‘ಗೋರಿ ತೇರಾ ಗೌನ್ ಬಡಾ ನ್ಯಾರಾ’ ಎಂಬ ಒಕ್ಕಣೆಯೂ ಇದೆ.

ಈ ಜಾಹೀರಾತನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ದೀಪಿಕಾ, ‘ನಿಜಕ್ಕೂ ಇದು ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ಮತ್ತೊಂದು ಅರ್ಥದಲ್ಲಿ ಹೇಳಬೇಕೆಂದರೆ ಬ್ರೆಡ್ ಮೇಲೆ ಬೆಣ್ಣೆ ಬಿದ್ದಂತೆ!’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಣವೀರ್ ಸಿಂಗ್ ‘ಅಕ್ಷರಶಃ ಇದು ನಿಜಕ್ಕೂ ಬ್ರೆಡ್ ಮೇಲೆ ಬೆಣ್ಣೆ ಬಿದ್ಧಂತೆ’ ಎಂದಿದ್ದಾರೆ.

ದೀಪಿಕಾ ಬಸುರಿಯೇ?

ಹಸಿರು ಬಣ್ಣದ ಉಡುಗೆಯಲ್ಲಿ, ತಲೆಗೆ ಗುಲಾಬಿ ಬಣ್ಣದ ಹೆಡ್ ಬ್ಯಾಂಡ್ ಕಟ್ಟಿಕೊಂಡಿದ್ದ ದೀಪಿಕಾಳ ಚಿತ್ರವನ್ನು ತುಸು ಮಾರ್ಪಡಿಸಿ, ಚಿಕ್ಕ ಹುಡುಗಿಯ ಮುಖದ ರೀತಿಯಲ್ಲಿರುವ ಚಿತ್ರವನ್ನು ರಣವೀರ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ‘ಏನಾದರೂ ವಿಶೇಷ ಸುದ್ದಿ ಇದೆಯೇ’ ಎಂದು ಕೇಳಿದ್ದಾರೆ. ರಣವೀರ್ ಅವರ ಪೋಸ್ಟ್ ನೋಡಿದವರು ದೀಪಿಕಾ ನಿಜಕ್ಕೂ ಬಸುರಿ ಇರಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಅಭಿಮಾನಿಯೊಬ್ಬರಂತೂ ರಣವೀರ್ಸಿಂಗ್ಗೆ ‘ಅಭಿನಂದನೆಗಳು ಸರ್. ಈ ಒಂಬತ್ತು ತಿಂಗಳು ‘ನಮ್ಮ ದೀಪಿಕಾ’ಳನ್ನು ಚೆನ್ನಾಗಿ ನೋಡಿಕೊಳ್ಳಿ’ ಅಂತಲೂ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.