ಮುಂಬೈ: ಬಾಲಿವುಡ್ನ ಹಿಟ್ ಸಿನಿಮಾ ‘ಧೂಮ್’ ನಿರ್ದೇಶಕ ಸಂಜಯ್ ಗಧ್ವಿ (56) ಅವರು ಭಾನುವಾರ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು. ಈ ಬಗ್ಗೆ ಸಂಜಯ್ ಅವರ ಪುತ್ರಿ ತಿಳಿಸಿದ್ದಾರೆ.

ಬಾಲಿವುಡ್ನಲ್ಲಿ 2004ರಲ್ಲಿ ಬಿಡುಗಡೆಯಾದ ಧೂಮ್ ಹಾಗೂ 2006ರಲ್ಲಿ ತೆರೆಕಂಡ ಧೂಮ್2 ಚಿತ್ರ ಸಖತ್ ಹಿಟ್ ಕಂಡಿತ್ತು. ಅಭಿಷೇಕ್ ಬಚ್ಚನ್, ಹೃತಿಕ್ ರೋಶನ್, ಜಾನ್ ಅಬ್ರಾಹಮ್ ಸೇರಿದಂತೆ ಹಲವು ತಾರೆಯರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಸಂಜಯ್ ಅವರು ಆರೋಗ್ಯವಾಗಿಯೇ ಇದ್ದರು, ಹೃದಾಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆಗಳಿವೆ ಎಂದು ಪುತ್ರಿ ಹೇಳಿದ್ದಾರೆ.

ಸಂಜಯ್ ಅವರ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಸಂತಾಪ ಸೂಚಿಸಿದೆ.

2000ರಲ್ಲಿ ‘ತೇರೆ ಲಿಯೆ’ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.