ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಹಾಗೂ 26/11ರ ಉಗ್ರರ ದಾಳಿ ಪ್ರಕರಣಗಳ ತನಿಖೆ ನಡೆಸಿದ್ದ ತಂಡದಲ್ಲಿದ್ದನಿವೃತ್ತ ಪೊಲೀಸ್ ಅಧಿಕಾರಿ ರಾಕೇಶ್ ಮರಿಯಾ ಅವರ ಜೀವನಾಧಾರಿತ ಸಿನಿಮಾ ತಯಾರಾಗಲಿದೆ. ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗಳಿಂದ ಖ್ಯಾತಿ ಗಳಿಸಿರುವ ನಿರ್ದೇಶಕ ಹಾಗೂ ನಿರ್ಮಾಪಕ ರೋಹಿತ್ ಶೆಟ್ಟಿ ಈ ಚಿತ್ರ ನಿರ್ಮಿಸಲಿದ್ದಾರೆ.

ಈ ವಿಚಾರವನ್ನು ಸ್ವತಃ ರೋಹಿತ್ ಶೆಟ್ಟಿ ಅವರೇ ಖಚಿತಪಡಿಸಿದ್ದು, ರಾಕೇಶ್ ಅವರೊಂದಿಗಿನ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

'93ರ ಮುಂಬೈ ಸ್ಫೋಟ ಪ್ರಕರಣಗಳನ್ನು ಭೇದಿಸುವುದರಿಂದ ಹಿಡಿದು, 90ರ ದಶಕದ ಅಂತ್ಯದಲ್ಲಿ ಮುಂಬೈ ಭೂಗತ ಜಗತ್ತನ್ನು ನಿರ್ಭೀತಿಯಿಂದ ಎದುರಿಸಿದ್ದು, 26/11ರ ದಾಳಿ ಪ್ರಕರಣದಲ್ಲಿ ಸಿಕ್ಕಿಬಿದ್ದ ಏಕೈಕ ಉಗ್ರ ಅಜ್ಮಲ್ ಕಸಬ್ನ ವಿಚಾರಣೆ ನಡೆಸುವವರೆಗೆ... ರಾಕೇಶ್ ಮರಿಯಾ ಧೈರ್ಯ ಮತ್ತು ಸ್ಥೈರ್ಯಕ್ಕೆ ಹೆಸರಾಗಿದ್ದರು. ನಿಜ ಜೀವನದ ಈ ಸೂಪರ್ಕಾಪ್ ಪ್ರಯಾಣವನ್ನು ತೆರೆ ಮೇಲೆ ತರುತ್ತಿರುವುದು ಗೌರವದ ಸಂಗತಿ' ಎಂದು ಶೆಟ್ಟಿ ಬರೆದುಕೊಂಡಿದ್ದಾರೆ.

ಈ ಚಿತ್ರ ನಿರ್ಮಾಣದಲ್ಲಿ ರಿಲಯನ್ಸ್ ಎಂಟರ್ಟೇನ್ಮೆಂಟ್ ಕೂಡ ರೋಹಿತ್ಗೆ ಜೊತೆಯಾಗಲಿದೆ.

ಪಾತ್ರವರ್ಗ, ನಿರ್ದೇಶಕ ಮತ್ತು ಚಿತ್ರದ ಟೈಟಲ್ ಇನ್ನಷ್ಟೇ ಪ್ರಕಟವಾಗಬೇಕಿದೆ.

1981ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಮರಿಯಾ, ಸದ್ಯ ನಿವೃತರಾಗಿದ್ದು ಮುಂಬೈನಲ್ಲಿ ವಾಸವಿದ್ದಾರೆ. ತಮ್ಮ ಮೂರು ದಶಕಗಳ ಸೇವಾವಧಿಯಲ್ಲಿ ಸಾಕಷ್ಟು ಸೂಕ್ಷ್ಮ ಪ್ರಕರಣಗಳನ್ನು ಅವರು ನಿಭಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.