ಇಟಲಿಯಲ್ಲಿ ಕೊರೊನಾ ಸೋಂಕು ಪೀಡಿತರ ಚಿಕಿತ್ಸೆ ಸಂಬಂಧ ಟ್ವೀಟರ್ನಲ್ಲಿ ವ್ಯಂಗ್ಯಭರಿತ ಅಭಿಪ್ರಾಯ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.ನಟ ಡಾಲಿ ಧನಂಜಯ ಕೂಡ ಚಕ್ರವರ್ತಿಯವರ ಟೀಕಾತ್ಮಕ ಅಭಿಪ್ರಾಯಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಜತೆಗೆ ಮಾನವೀಯತೆ ಪಾಠ ಹೇಳಿದ್ದಾರೆ.

‘ಏನಾದರು ಆಗು ಮೊದಲು ಮಾನವನಾಗು’ ಎಂದುಡಾಲಿ ಧನಂಜಯ್ ಟ್ವೀಟ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಡಾಲಿ ಅಭಿಪ್ರಾಯದ ಟ್ವೀಟ್ ಅನ್ನು 400ಕ್ಕೂ ಹೆಚ್ಚು ಜನರು ರೀ ಟ್ವೀಟ್ ಮಾಡಿದ್ದು, ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಜಾಲತಾಣಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಜೀಸಸ್ ಎಲ್ಲರನ್ನು ಪ್ರೀತಿಸುತ್ತಾನೆ’ ಎಂಬ ಸಂದೇಶ ಹೊತ್ತುಕ್ರೈಸ್ತ ಮಿಷನರಿಗಳು ವಿಶ್ವದಾದ್ಯಂತ ಸಂಚರಿಸುತ್ತಾರೆ. ಆದರೆ ಇಟಲಿಯಲ್ಲಿ ಕೊರೊನಾ ಪೀಡಿತ 80ಕ್ಕೂ ಹೆಚ್ಚು ಜನರಿಗೆ ಸೇವೆ ಸಲ್ಲಿಸಲು ಅಲ್ಲಿನ ಸರ್ಕಾರ ವಿಫಲವಾಗಿದೆ. 80 ವರ್ಷ ಮೇಲ್ಪಟ್ಟ ಕೊರೊನಾ ಪೀಡಿತರನ್ನು ವೈದ್ಯರು ತೀವ್ರ ನಿಗಾ ಘಟಕದಲ್ಲಿರಿಸಿಸೇವೆ ನೀಡಲು ತಿರಸ್ಕರಿಸುತ್ತಾರೆ. ದೇವರು ಎಲ್ಲರನ್ನೂ ಪ್ರೀತಿಸುತ್ತಾನೆ ಎಂದಾದರೆ 80ಕ್ಕಿಂತ ಹೆಚ್ಚು ವಯಸ್ಸಿನ ಜನರನ್ನು ಏಕೆ ಪ್ರೀತಿಸುವುದಿಲ್ಲ!” ಎಂದು ಚಕ್ರವರ್ತಿ ಪ್ರಶ್ನಿಸುವ ಮೂಲಕ ತಮ್ಮ ಟ್ವಿಟರ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.