ಒಟಿಟಿ ವೇದಿಕೆ ಜೀ5ನಲ್ಲಿ ಸಾಲು ಸಾಲು ಕನ್ನಡ ಸಿನಿಮಾಗಳು ತೆರೆಕಾಣುತ್ತಿವೆ. ಕ್ರೇಜಿಸ್ಟಾರ್ ರವಿಚಂದ್ರ ವಿ. ನಟನೆಯ ‘ಕನ್ನಡಿಗ’, ಶಿವರಾಜ್ಕುಮಾರ್ ನಟನೆಯ ‘ಭಜರಂಗಿ–2’, ರಾಜ್ ಬಿ. ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಗರುಡ ಗಮನ ವೃಷಭ ವಾಹನ’ ಜೀ5 ಮೂಲಕ ಲಕ್ಷಾಂತರ ಪ್ರೇಕ್ಷಕರನ್ನು ತಲುಪಿದೆ. ಇದರ ಬೆನ್ನಲ್ಲೇ ರವಿಚಂದ್ರ ವಿ. ನಟನೆಯ ‘ದೃಶ್ಯ–2’ ಜೀ5ನಲ್ಲಿ ಫೆ.25ರಂದು ತೆರೆಕಾಣಲಿದೆ.

ಈ ಸಿನಿಮಾದಲ್ಲಿ ‘ರಾಜೇಂದ್ರ ಪೊನ್ನಪ್ಪ’ನ ಪಾತ್ರದಲ್ಲಿ ರವಿಚಂದ್ರ ವಿ. ಅವರು ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ್ದರು. ಕಳೆದ ಡಿಸೆಂಬರ್ 10ರಂದು ತೆರೆಕಂಡಿದ್ದ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಪಿ.ವಾಸು ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿತ್ತು. ರವಿಚಂದ್ರ, ನವ್ಯಾ ನಾಯರ್, ಆರೋಹಿ ನಾರಾಯಣ್ ಮುಂತಾದವರು ನಟಿಸಿದ್ದ ಈ ಚಿತ್ರದ ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಕುತೂಹಲದ ಅಂಚಿನಲ್ಲಿ ಇರಿಸಿತ್ತು. ಮಲಯಾಳಂನಲ್ಲಿ ತೆರೆಕಂಡಿದ್ದ ‘ದೃಶ್ಯಂ–2’ನ ರಿಮೇಕ್ ಆಗಿದ್ದ ಈ ಸಿನಿಮಾವನ್ನು ಕನ್ನಡದ ಸೊಗಡಿಗೆ ತಕ್ಕಂತೆ ಪಿ.ವಾಸು ಪ್ರೇಕ್ಷಕರ ಎದುರಿಗೆ ಇಟ್ಟಿದ್ದರು.

ಎರಡನೇ ಭಾಗದಲ್ಲಿ ನಟ ಪ್ರಮೋದ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಸಿನಿಮಾ ಕಥೆಗಾರನ ಪಾತ್ರದಲ್ಲಿ ಅನಂತನಾಗ್ ತೆರೆಯ ತೂಕಹೆಚ್ಚಿಸಿದ್ದರು. ಶಿವಾಜಿ ಪ್ರಭು, ಆಶಾ ಶರತ್ ಅಭಿನಯವೂ ಅಮೋಘವಾಗಿತ್ತು. ಚಿತ್ರಕ್ಕೆ ಸುರೇಶ್ ಅರಸ್ ಸಂಕಲನ, ಜಿಎಸ್ವಿ ಸೀತಾರಾಮ್ ಛಾಯಾಗ್ರಹಣ, ಅಜನೀಶ್ ಬಿ. ಲೋಕನಾಥ್ ಹಿನ್ನೆಲೆ ಸಂಗೀತವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.