ಬೆಂಗಳೂರು: ‘ಡ್ರಗ್ಸ್ ಪ್ರಕರಣದ ಮಾಸ್ಟರ್ ಮೈಂಡ್ ಶೀಘ್ರ ಹೊರಬರುತ್ತಾರೆ. ಪ್ರಕರಣ ಸರಿಯಾಗಿ ತನಿಖೆ ನಡೆದರೆ ನಿರೂಪಕಿ ಅನುಶ್ರೀ ಅವರು ಜೈಲು ಪಾಲಾಗಲಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾ
ಡಿದ ಅವರು, ‘ಡ್ರಗ್ ಪ್ರಕರಣ ಸಂಬಂಧಿಸಿ ಪ್ರಕರಣಗಳನ್ನು ಮತ್ತೆ ತೆರೆದು ತನಿಖೆಗೆ ಒಳಪಡಿಸಬೇಕು. ಈ ಪ್ರಕರಣದ ಹಿಂದಿರುವ ಮಾಸ್ಟರ್ ಮೈಂಡ್ ಸಿನಿಮಾ ನಿರ್ಮಾಪಕ, ವಿತರಕ, ರಾಜಕಾರಣಿಯೂ ಆಗಿದ್ದಾರೆ’ ಎಂದರು.

‘ಡ್ರಗ್ಸ್ ಪ್ರಕರಣದಲ್ಲಿ ಮಂಗಳೂರಿನಲ್ಲಿ ಅಖಿಲ್ ನೌಶೀಲ್, ಕಿಶೋರ್ ಅಮನ್ ಶೆಟ್ಟಿ, ಮಹಮದ್ ಶಕೀಲ್, ಫ್ರಾಂಕ್ ಸಂಡೇ ಇಬಚು, ಶಮೀನ್ ಫರ್ನಾಂಡೀಸ್, ಶಾಮ್ ನವಾಜ್, ಇಷ್ಟು ಜನರ ಹೆಸರು ಪೊಲೀಸರ ಆರೋಪಪಟ್ಟಿಯಲ್ಲಿದೆ. ಆದರೆ, ತರುಣ್ ಹೆಸರಿಲ್ಲ. ಈತನ ಬಗ್ಗೆಯೂ ತನಿಖೆ ಆಗಬೇಕು’ ಎಂದರು.

‘ನಟರೂ ಡ್ರಗ್ಸ್ ತೆಗೆದುಕೊಂಡಿದ್ದಾರೆ. ಅವರು, ಪಾರ್ಟಿಯಲ್ಲಿ ಮೋಜಿಗಾಗಿ ಮಾಡಿದ್ದಾರೆ. ಆದರೆ, ಮಾರಾಟ ಮಾಡಿಲ್ಲ. ತೆಗೆದುಕೊಂಡಿರುವುದೂ ತಪ್ಪೇ. ಆದರೆ, ನಟಿಯರು ಅದನ್ನು ಮಾರಾಟ ಮಾಡಿ ದುಡ್ಡಿನಾಸೆಗೆ ಬಿದ್ದು ಸಿಕ್ಕಿಹಾಕಿಕೊಂಡಿದ್ದಾರೆ’ ಎಂದು ಸಂಬರಗಿ ಹೇಳಿದರು.

ನವೆಂಬರ್ 1ರಂದು ‘ನಶೆಯೆಂದರೆ’ ಎಂಬ ವಿಡಿಯೊ ಹಾಡು ಮತ್ತು ‘ಶುಗರ್ ಡ್ಯಾಡಿ’ ಪುಸ್ತಕ ಬಿಡುಗಡೆ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಡ್ರಗ್ಸ್ ಜಾಲಕ್ಕೆ ಒಳಗಾಗಿ ತೊಂದರೆಗೊಳಗಾದವರು, ಆ ಜಾಲದಿಂದ ಮುಕ್ತರಾದವರೂ ಇರಲಿದ್ದಾರೆ’ ಎಂದು ಹೇಳಿದರು

‘ರಾಜ್ಯದಲ್ಲಿ ಡ್ರಗ್ಸ್ ಸಂಬಂಧಿಸಿ ಸಿಸಿಬಿ ಪೊಲೀಸರು 3,300 ಪ್ರಕರಣಗಳನ್ನು ದಾಖಲಿಸಿದ್ದಾರೆ. 2020 ಮತ್ತು 2021ರಲ್ಲಿ ಇದರಲ್ಲಿ ಏರಿಕೆ ಆಗಿದೆ. ಮಕ್ಕಳು, ಯುವಕರಿಂದ ಅಪರಾಧ ನಡೆದಿವೆ. ಅಂಥವರ ವಿರುದ್ಧ ಪೋಷಕರೇ ಖುದ್ದಾಗಿ ದೂರು ನೀಡಿರುವುದು ನಡೆದಿದೆ’ ಎಂದು ಹೇಳಿದರು.

‘ಡ್ರಗ್ಸ್ ಸಂಬಂಧಿಸಿ ಯಾವ ಘಟನೆಗಳು ಸಾಕ್ಷಿಗಳಿಲ್ಲದೇ ಬಚಾವಾಗಿವೆ ಎಂಬುದನ್ನು ಬರೆದಿದ್ದೇನೆ. ಫಾರ್ಮ್‌ಹೌಸ್ ಕಥೆಯಿಂದ ಹಿಡಿದು, ಅಪ್ಪನನ್ನು ಅಪಹರಿಸಿದ ಪ್ರಕರಣದವರೆಗೂ ‘ಶುಗರ್ ಡ್ಯಾಡಿ’ಯಲ್ಲಿ ಬರೆದಿದ್ದೇನೆ.

‘ಶುಗರ್ ಡ್ಯಾಡಿ’ ಯಾರು ಎಂಬುದನ್ನೂ ಪುಸ್ತಕದಲ್ಲಿ ಬರೆದಿದ್ದೇನೆ ಎಂದರು. ಶುಗರ್‌ಡ್ಯಾಡಿಯಲ್ಲಿ ಇದುವರೆಗೆ ಕಾಣದ ಅನೇಕ ಉಪಕಥೆಗಳು, ನಟರ ಕಥೆಗಳೂ ಇವೆ’ ಎಂದರು.

ಶುಗರ್ ಡ್ಯಾಡಿ ವ್ಯಾಖ್ಯಾನ: ‘ಚಿಕ್ಕ ವಯಸ್ಸಿನ ಯುವತಿ ತನ್ನ ತಂದೆಯ ವಯಸ್ಸಿನ ವ್ಯಕ್ತಿಯನ್ನು ಬಾಯ್‌ಫ್ರೆಂಡ್ ಆಗಿ ಇಟ್ಟುಕೊಂಡಿರುವುದೇ ಶುಗರ್ ಡ್ಯಾಡಿ ಎಂದು ಸಂಬರಗಿ ಹೇಳಿದರು.

‘ಶುಗರ್ ಡ್ಯಾಡಿ’ಯು ಅನುಶ್ರೀ ಹೆಸರನ್ನು ಕೈಬಿಡಲು ಪ್ರಭಾವ ಬೀರಿರಬಹುದಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಬರಗಿ, ‘ಮೇಲ್ನೋಟಕ್ಕೆ ಇದು ಸ್ಪಷ್ಟವಾಗಿದೆ. ಕಳೆದವರ್ಷ ಸೆ. 20ರಂದು ಹಿಂದಿನ ಮುಖ್ಯಮಂತ್ರಿಯ ಕರೆ ಬಂದದ್ದನ್ನು ಹೇಳಿದ್ದೆ. ಆದರೆ, ಆ ಕರೆಯಲ್ಲಿ ಈ ಪ್ರಕರಣವನ್ನು ಬೆಂಗಳೂರಿಗಷ್ಟೇ ಫೋಕಸ್ ಮಾಡಿ, ಮಂಗಳೂರಿನತ್ತ ಕೇಂದ್ರೀಕರಿಸುವುದು ಬೇಡ ಎಂಬ ಧಾಟಿಯಲ್ಲಿ ಹೇಳಿದ್ದಾರೆ. ಆ ದೂರವಾಣಿ ಕರೆಯ 28 ಸೆಕೆಂಡ್‌ಗಳ ಆಡಿಯೋವನ್ನೂ ಶೀಘ್ರ ಬಿಡುಗಡೆ ಮಾಡುತ್ತೇನೆ’ ಎಂದು ಹೇಳಿದರು.

‘ಡ್ರಗ್ಸ್ ಪ್ರಕರಣದಲ್ಲಿ ಮಂಗಳೂರಿನಲ್ಲಿ ಅಖಿಲ್ ನೌಶೀಲ್, ಕಿಶೋರ್ ಅಮನ್ ಶೆಟ್ಟಿ, ಮಹಮದ್ ಶಖೀಲ್, ಫ್ರಾಂಕ್ ಸಂಡೇ ಇಬಚು, ಶಮೀನ್ ಫರ್ನಾಂಡೀಸ್, ಶಾಮ್ ನವಾಜ್ ಹೆಸರುಗಳು ಪೊಲೀಸರ ಆರೋಪಪಟ್ಟಿಯಲ್ಲಿವೆ. ತರುಣ್ ಹೆಸರನ್ನು ಕೈಬಿಟ್ಟರೆ ಅನುಶ್ರೀ ಅವರನ್ನು ಬಚಾವ್ ಮಾಡಬಹುದು ಎಂಬುದು ಇಲ್ಲಿನ ಲೆಕ್ಕಾಚಾರ. ಇಲ್ಲಿ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ಮಧ್ಯಸ್ಥಿಕೆ ಕೆಲಸ ಮಾಡಿದೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.