ಮಲೆಯಾಳಂನಲ್ಲಿ ಮೂಡಿಬಂದ ‘ದೃಶ್ಯಂ–2’ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗಲು ಸಜ್ಜಾಗಿದೆ. ನಿರ್ದೇಶಕ ಜೀತು ಜೋಸೆಫ್ ಅವರು ತೆಲುಗಿನ ಖ್ಯಾತ ನಟ ವೆಂಕಟೇಶ್ ಅವರೊಂದಿಗೆ ಸೇರಿ ರಿಮೇಕ್ಗೆ ಸಿದ್ಧವಾಗಿದ್ದಾರೆ. ಈ ಸುದ್ದಿಯನ್ನು ಜೀತು ಅವರು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

ಮಾರ್ಚ್ನಿಂದ ‘ದೃಶ್ಯಂ - 2’ ತೆಲುಗು ಆವೃತ್ತಿಯ ಚಿತ್ರೀಕರಣ ಆರಂಭವಾಗಲಿದೆ. ತೆಲುಗಿನಲ್ಲಿ ಜೀತು ಅವರದ್ದು ಮೊದಲ ಪ್ರಯೋಗವಿದು. ಮಲೆಯಾಳಂನಲ್ಲಿ ಇದೇ ಚಿತ್ರದಲ್ಲಿ ಮೋಹನ್ಲಾಲ್ ಅವರ ಅಭಿನಯ ಇದೆ. ಫೆ. 19ರಂದು ಮಲೆಯಾಳಂ ಒಟಿಟಿ ವೇದಿಕೆಯಲ್ಲಿ ಇದು ಬಿಡುಗಡೆ ಆಗಿತ್ತು.

ಕಥೆಯಲ್ಲೇನಿದೆ?

ಕುಟುಂಬವನ್ನು ರಕ್ಷಿಸಲು ನಾಯಕ ಪೊಲೀಸ್ ಮಹಾ ನಿರ್ದೇಶಕರ ಮಗನನ್ನು ಕೊಲ್ಲುತ್ತಾನೆ. ನಾಯಕನ ಮೇಲೆ ಅನುಮಾನ ಬಲವಾಗಿದ್ದರೂ ಅದನ್ನು ಸಾಬೀತು ಮಾಡಲು ಪೊಲೀಸರು ಸಾಕ್ಷ್ಯ ಸಂಗ್ರಹಿಸುವಲ್ಲಿ ವಿಫಲರಾಗುತ್ತಾರೆ. ಹೊಸದಾಗಿ ಕಟ್ಟುತ್ತಿರುವ ಪೊಲೀಸ್ ಠಾಣೆಯ ಕಟ್ಟಡದೊಳಗೇ ನಾಯಕ ಮೃತದೇಹವನ್ನು ಹೂತಿರುತ್ತಾನೆ. ಅಲ್ಲಿಗೆ ಮೊದಲ ಭಾಗದ ಚಿತ್ರ ಅಂತ್ಯಗೊಳ್ಳುತ್ತದೆ. ಎರಡನೇ ಭಾಗದಲ್ಲಿ ಇದೇ ಪ್ರಕರಣದೊಂದಿಗೆ ಹೋರಾಡುವ ನಾಯಕನ ಕಥೆ ಮುಂದುವರಿಯುತ್ತದೆ.

ಮಲೆಯಾಳಂ ಚಿತ್ರದಲ್ಲಿ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್, ಮತ್ತು ಸಿದ್ದೀಕ್ ಇತರರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.