ಹುಬ್ಬಳ್ಳಿ: ನಗರದ ಶ್ರೀ ದುರ್ಗಾ ಡೆವಲಪರ್ಸ್ ಮತ್ತು ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಭಾನುವಾರ ಸಂಜೆಸಲಗ ಕ್ರಿಕೆಟ್ ಪಂದ್ಯ ನಡೆಯಲಿದೆ.

ಚಿತ್ರನಟ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ್ ಪಂದ್ಯ ಆಡಲಿದ್ದಾರೆ. ಸಲಗಸಿನಿಮಾ ತಂಡ ಪ್ರಚಾರಾರ್ಥವಾಗಿ ಹುಬ್ಬಳ್ಳಿ ಪತ್ರಕರ್ತರ ಜೊತೆ ಪಂದ್ಯವಾಡಲಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದದುನಿಯಾ ವಿಜಯ್, 'ಕೋವಿಡ್ ಕಾರಣದಿಂದ ಸರ್ಕಾರ ಸಿನಿಮಾ ವೀಕ್ಷಿಸಲು ನಿರ್ಬಂಧ ಹಾಕಿರುವುದು ಸರಿಯಲ್ಲ. ಸರ್ಕಾರದಿಂದ ನಮಗೆ ಅನ್ಯಾಯವಾಗಿದೆ. ಸರ್ಕಾರವೇ ನಮಗೆ ನ್ಯಾಯ ಒದಗಿಸಬೇಕು' ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಸಲಗ ಚಿತ್ರದ ಸಹನಟ ಡಾಲಿ ಧನಂಜಯ, 'ಎ. 7ರ ಬಳಿಕವೂ ಚಿತ್ರ ಮಂದಿರಗಳಲ್ಲಿ ಶೇ 100ರಷ್ಟು ಸೀಟುಗಳ ಭರ್ತಿಗೆ ಸರ್ಕಾರ ಅವಕಾಶ ಕೊಡಲೇಬೇಕು. ಅನುಮತಿ ಕೊಡುವ ತನಕ ಸಲಗ ಸಿನಿಮಾ ಬಿಡುಗಡೆ ಮಾಡುವುದಿಲ್ಲ. ನಿರ್ದೇಶಕ ಹಾಗೂ ನಿರ್ಮಾಪಕರ ಬದುಕು ಜನರ ಸಿನಿಮಾ ವೀಕ್ಷಣೆಯ ಮೇಲೆ ಅವಲಂಬಿತವಾಗಿದೆ. ಸರ್ಕಾರ ನಿರ್ಬಂಧ ಸಡಲಿಸಿದ ಬಳಿಕವಷ್ಟೇ ಸಿನಿಮಾ ಬಿಡುಗಡೆ ಮಾಡಲಾಗುವುದು. ಒಂದೂವರೆ ವರ್ಷದಲ್ಲಿ ಸಿನಿಮಾ ರಂಗ ಸಾಕಷ್ಟು ಕಷ್ಟ ಅನುಭವಿಸಿದೆ. ಮುಂದೆಯೂ ಇದೇ ಕಷ್ಟ ಬೇಡ'ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.