ಹೊಸಬರೇ ಸೇರಿ ಮಾಡಿರುವ ನೈಜ ಘಟನೆ ಆಧಾರಿತ ಚಿತ್ರ ‘ಲವ್ ರೆಡ್ಡಿ’ ನ.22ರಂದು ಕನ್ನಡದಲ್ಲಿ ತೆರೆಗೆ ಬರುತ್ತಿದೆ. ನಟ ದುನಿಯಾ ವಿಜಯ್ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಕೋರಿದರು.

‘ಲವ್ ರೆಡ್ಡಿ ಸಿನಿಮಾ ನೋಡಿದ್ದೇನೆ. ಪ್ರತಿ ಪಾತ್ರಗಳು ಈಗಲೂ ನನಗೆ ಕಾಡುತ್ತಿವೆ. ಹೀಗಾಗಿ ತಂಡದ ಜೊತೆಗೆ ನಿಂತಿರುವೆ. ಕನ್ನಡದಲ್ಲಿ ಸಿನಿಮಾ ಪ್ರೆಸೆಂಟ್ ಮಾಡಲು ಒಪ್ಪಿಕೊಂಡೆ. ಹೊಂಬಾಳೆ ಸಂಸ್ಥೆ ಚಿತ್ರವನ್ನು ವಿತರಣೆ ಮಾಡುತ್ತಿದೆ. ಸಿನಿಮಾ ಚೆನ್ನಾಗಿಲ್ಲ ಎಂದರೆ ನಮ್ಮ ಸಿನಿಮಾ ಚೆನ್ನಾಗಿದೆ ಎಂದು ಹಠ ಮಾಡಬಾರದು. ಸಿನಿಮಾ ಚೆನ್ನಾಗಿದ್ದಾಗ ಹಿಗ್ಗೋದು ಬೇಡ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸೋಣ’ ಎಂದರು ವಿಜಯ್.

ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಗಡಿಭಾಗದಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾಗೆ ಸ್ಮರಣ್ ರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಯುವ ನಟ ಅಂಜನ್ ರಾಮಚಂದ್ರಗೆ ಶ್ರಾವಣಿ ಜೋಡಿಯಾಗಿದ್ದಾರೆ. ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ಚಿತ್ರೀಕರಣಗೊಂಡಿದ್ದು, ತೆಲುಗು ಆವೃತಿ ಈಗಾಗಲೇ ಬಿಡುಗಡೆಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.