ಇಮ್ರಾನ್ ಹಶ್ಮಿ ಹೆಸರು ಒಂದು ಕ್ಷಣ ಕಿವಿಗೆ ಬಿದ್ದರೆ ಅಥವಾ ಚಿತ್ರ ಎದುರಿಗೆ ಬಂದ್ರೆ ಸಾಕು, ಮೊದಲಿಗೆ ನೆನಪಿಗೆ ಬರುವ ಇಮೇಜ್: ಸೀರಿಯಲ್ ಕಿಸ್ಸರ್. ಅವರದ್ದು ಎಂಥದ್ದೇ ಚಲನಚಿತ್ರವಿರಲಿ, ಕ್ರೈಮ್, ಥ್ರಿಲ್ಲರ್, ಆ್ಯಕ್ಷನ್ ಅಥವಾ ರೊಮಾನ್ಸ್, ಒಂದೇ ಒಂದು ಚುಂಬನ ದೃಶ್ಯವಿಲ್ಲದೇ ಅದು ಪೂರ್ಣಗೊಳ್ಳುವುದಿಲ್ಲ ಎಂಬ ಮಾತಿದೆ.

‘ಮರ್ಡರ್’, ‘ಆಶಿಕ್ ಬನಾಯಾ ಆಪ್ನೆ’, ‘ಗ್ಯಾಂಗ್ಸ್ಟರ್‘ ಸೇರಿದಂತೆ ಆರಂಭಿಕ ಚಲನಚಿತ್ರಗಳು ತೆರೆ ಕಂಡಾಗ, ಚಿತ್ರದ ಕಥಾವಸ್ತು, ಕಲಾವಿದರ ಅಭಿನಯ ಮತ್ತು ಇತರ ವಿಷಯಗಳಿಗಿಂತ ಇಮ್ರಾನ್ ಹಶ್ಮಿಯ ಕಿಸ್ಸಿಂಗ್ ದೃಶ್ಯಗಳೇ ಹೆಚ್ಚು ಚರ್ಚಿತವಾದವು. ಬೇಡಬೇಡವೆಂದರೂ ಅಂಥದ್ದೇ ಪಾತ್ರಗಳು ಹುಡುಕಿಕೊಂಡು ಬಂದವು ಕೂಡ!

ಬಾಲಿವುಡ್ ಪ್ರವೇಶಿಸಿದ ಎರಡು ದಶಕಗಳ ಅವಧಿಯಲ್ಲಿ ಇಮ್ರಾನ್ ಪಾತ್ರಗಳಲ್ಲಿ ಮತ್ತು ವ್ಯಕ್ತಿತ್ವವನ್ನು ಸೂಕ್ಷ್ಮವಾಗಿ ಅವಲೋಕಿಸಿರೆ, ಸಾಕಷ್ಟು ಬದಲಾವಣೆಗಳು ಆಗಿರುವುದನ್ನು ಗ್ರಹಿಸಬಹುದು. ‘ಮರ್ಡರ್’ ತರಹದ ಚಲನಚಿತ್ರಗಳಲ್ಲಿನ ಸೀರಿಯಲ್ ಕಿಸ್ಸರ್ ಪಾತ್ರಗಳಿಂದ ಆರಂಭಗೊಂಡ ಫಿಲ್ಮ್ ಕೆರಿಯರ್ ಈಗ ಪ್ರಚಲಿತ ವಿಷಯಗಳ ಆಧರಿಸಿದ ‘ವೈ ಚೀಟ್ ಇಂಡಿಯಾ‘ ಎಂಬ ಚಲನಚಿತ್ರದಲ್ಲಿನ ಗಂಭೀರ ಪಾತ್ರದವರೆಗೆ ಬಂದಿದೆ.

ಕೆರಿಯರ್ ಆರಂಭದ ದಿನಗಳಿಂದಲೂ ಅಂಟಿಕೊಂಡಿರುವ ಇಮೇಜ್ನಿಂದ ಹೊರಬರಲು ಪ್ರಯತ್ನಿಸುತ್ತಿರುವ ಇಮ್ರಾನ್ ಅದಕ್ಕಾಗಿ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆ, ಸಾಮಾಜಿಕ ಸವಾಲುಗಳು, ಭ್ರಷ್ಟಾಚಾರ ವ್ಯಾಪಕತೆ, ಅವ್ಯವಸ್ಥೆ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತಿದ್ದಾರೆ.

ಔಷಧಿ ಉದ್ಯಮದ ಏರಿಳಿತ ಮತ್ತು ಭ್ರಷಾಚಾರ ಆಧರಿಸಿರುವ ‘ಟೈಗರ್ಸ್’ (2014) ಚಲನಚಿತ್ರವು ಇನ್ನೂ ಪೂರ್ಣಪ್ರಮಾಣದಲ್ಲಿ ತೆರೆ ಕಾಣಬೇಕಿದೆ. ಟೊರಂಟೊ ಫಿಲಂ ಫೆಸ್ಟಿವಲ್ನಲ್ಲಿ ಪ್ರದರ್ಶನ ಕಂಡಿರುವ ಈ ಚಿತ್ರದ ಬಿಡುಗಡೆಗೆ ಹಲವು ಅಡ್ಡಿ ಆತಂಕಗಳಿವೆ. ಆದರೆ ಬೇಡಿಕೆಯ ಮೇರೆಗೆ ಕಳೆದ ನವೆಂಬರ್ನಲ್ಲಿ ಈ ಚಿತ್ರದ ಡಿಜಿಟಲ್ ಸ್ವರೂಪ ಬಿಡುಗಡೆಯಾಗಿದೆ.

ಎರಡು ವರ್ಷಗಳಲ್ಲಿ ಇಮ್ರಾನ್ ಅಭಿನಯದ ಇನ್ನಷ್ಟು ಕುತೂಹಲಕರ ಚಿತ್ರಗಳು ಬಿಡುಗಡೆಯಾಗಲಿವೆ. ‘ಫಾದರ್ಸ್ ಡೇ’, ‘ದಿ ಬಾಡಿ’, ‘ಕ್ಯಾಪ್ಟನ್ ನವಾಬ್’ ಅವುಗಳಲ್ಲಿ ಪ್ರಮುಖವಾದವು. ‘ಮರ್ಡರ್’ ನಾಲ್ಕನೇ ಭಾಗವನ್ನೂ ತೆರೆಗೆ ತರುವ ಬಗ್ಗೆ ಮಹೇಶ್ ಭಟ್ ಮತ್ತು ವಿಕ್ರಮ್ ಭಟ್ ಈಗಾಗಲೇ ಚರ್ಚೆ ನಡೆಸಿದ್ದಾರೆ.

ಈ ಎಲ್ಲಾ ಚಿತ್ರಗಳಲ್ಲಿ ಯಾವ್ಯಾವ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವರೋ ಎಂಬುದೇ ಕುತೂಹಲಕರ.

ಶಿಕ್ಷಣ ಅವ್ಯವಸ್ಥೆ ಬಿಚ್ಚಿಡುವ ‘ವೈ ಚೀಟ್ ಇಂಡಿಯಾ’

ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷ ಮತ್ತು ದೇಶದಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರದ ವಿಷಯ ಆಧರಿಸಿರುವ ‘ವೈ ಚೀಟ್ ಇಂಡಿಯಾ’ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಶೈಕ್ಷಣಿಕ ಅವ್ಯವಸ್ಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಉನ್ನತ ಶಿಕ್ಷಣದ ಅಧ್ಯಯನಕ್ಕಾಗಿ ನಡೆಸಲಾಗುವ ಪ್ರವೇಶ ಪರೀಕ್ಷೆಗಳು ಎಷ್ಟೆಲ್ಲ ಸವಾಲುಗಳಿಂದ ಕೂಡಿರುತ್ತವೆ ಮತ್ತು ಬಡ-ಮಧ್ಯಮ ಕುಟುಂಬಗಳ ಕನಸುಗಳು ಹೇಗೆಲ್ಲ ನುಚ್ಚುನೂರಾಗುತ್ತವೆ ಎಂಬುದನ್ನು ತೋರಿಸಿದ್ದಾರೆ.

ದೇಶದ ಬಹುತೇಕ ರಾಜ್ಯಗಳಲ್ಲಿ ಪರೀಕ್ಷೆಗಳು ಹೇಗೆ ನಡೆಯುತ್ತವೆ? ಸದಾ ಮದ್ಯ, ಮೋಜಿನಲ್ಲಿರುವ ತಮ್ಮ ಮಕ್ಕಳನ್ನು ಪರೀಕ್ಷೆಯಲ್ಲಿ ಪಾಸು ಮಾಡಿಸಲು ಮತ್ತು ಒಂದು ಪದವಿ ಪ್ರಮಾಣಪತ್ರ ಪಡೆಯಲು ಶ್ರೀಮಂತರು ಹೇಗೆ ಹಣದ ಆಮಿಷ ಒಡ್ಡುತ್ತಾರೆ? ಹಣದ ಅನಿವಾರ್ಯತೆ ಮತ್ತು ಬಡತನದ ಬಂಧನದಿಂದ ಬಿಡುಗಡೆಯಾಗಲು ಇನ್ನೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯುವ ಪ್ರತಿಭಾವಂತರು ಎಷ್ಟೆಲ್ಲ ಪಡಿಪಾಟಲು ಪಟ್ಟು ಬಲಿಯಾಗುತ್ತಾರೆ ಎಂಬುದನ್ನು ತೋರಿಸಿದೆ.

ವಿಭಿನ್ನ ಪಾತ್ರಗಳೇ ಇಷ್ಟ

ಗಾಂಭೀರ್ಯವಿಲ್ಲದ ಮೋಜಿನ ಪಾತ್ರಗಳಿಗಿಂತ ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲದವರೆಗೆ ಉಳಿಯಬಲ್ಲ ಪಾತ್ರಗಳಿಗೆ ಹಂಬಲಿಸುವ ಇಮ್ರಾನ್ ಅದಕ್ಕಾಗಿ ಒಂದೇ ತೆರನಾದ ಪಾತ್ರ ಅಥವಾ ಇಮೇಜ್ಗೆ ಅಂಟಿಕೊಂಡಿಲ್ಲ. ಒಂದೊಂದು ಚಿತ್ರದಲ್ಲೂ ಭಿನ್ನವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಂತಹ ಪ್ರಯತ್ನವನ್ನು ‘ದಿ ಡರ್ಟಿ ಪಿಕ್ಚರ್‘, ‘ದಿ ಟ್ರೇನ್’, ‘ಜನ್ನತ್’, ‘ಒನ್ಸ್ ಅಪ್ ಆನ್ ಎ ಟೈಮ್ ಇನ್ ಮುಂಬೈ’, ‘ಮಿ.ಎಕ್ಸ್’, ‘ಹಮಾರಿ ಅಧೂರಿ ಕಹಾನಿ’ ಮುಂತಾದ ಚಿತ್ರಗಳಲ್ಲಿ ಮಾಡಿರುವುದನ್ನು ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.