ಬಾಲಿವುಡ್ ನಟ ಇಮ್ರಾನ್ ಹಶ್ಮಿಯನ್ನು ಉತ್ತಮ ವ್ಯಕ್ತಿ ಎಂದು 'ಚೆಹ್ರೆ' ಚಿತ್ರದ ನಿರ್ಮಾಪಕ ಆನಂದ್ ಪಂಡಿತ್ ಹೊಗಳಿದ್ದಾರೆ.

ಡೆಕ್ಕನ್ ಹೆರಾಲ್ಡ್ ಜೊತೆ ಇಂದು(ಶುಕ್ರವಾರ) ಮಾತನಾಡಿರುವ ಅವರು, 'ಚಿತ್ರ ನಿರ್ಮಾಪಕರ ಸಂಕಷ್ಟಗಳೇನು ಎಂಬುದನ್ನು ನಟ ಇಮ್ರಾನ್ ಹಶ್ಮಿ ಅರಿತುಕೊಂಡಿದ್ದಾರೆ. ಅವರು ನಿರ್ಮಾಪಕರ ನಟ. ಸಹಕರಿಸಲು ಯಾವಾಗಲೂ ಸಿದ್ಧರಾಗಿದ್ದಾರೆ. ನಾನು ಅವರಲ್ಲಿ ಒಳ್ಳೆಯ ವ್ಯಕ್ತಿಯನ್ನು ಕಂಡಿದ್ದೇನೆ' ಎಂದು ತಿಳಿಸಿದ್ದಾರೆ.

ಇದೇ ವೇಳೆ ಅಮಿತಾಬ್ ಬಚ್ಚನ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪಂಡಿತ್, 'ಬಚ್ಚನ್ ಸಾಬ್ ಅವರ ಪೂರ್ಣ ವ್ಯಕ್ತಿತ್ವವೇ ನನಗೆ ಮೆಚ್ಚುಗೆಯಾಗುತ್ತದೆ. ಅವರು ಎಲ್ಲ ಸಹ ಕಲಾವಿದರಿಗೂ ಬೆಂಬಲ ನೀಡುತ್ತಾರೆ. ಅವರ ಶಿಸ್ತು ದೊಡ್ಡದು. ಒಂದು ಸಂಸ್ಥೆಯು ಅವರಿಂದ ಬಹಳಷ್ಟು ಕಲಿಯಬಹುದು' ಎಂದು ಹೇಳಿದ್ದಾರೆ.

ಇಂದು ಬಿಡುಗಡೆಯಾಗಿರುವ ಚೆಹ್ರೆ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ನಟಿಸಿದ್ದಾರೆ. ರೂಮಿ ಜಾಫ್ರಿ ನಿರ್ದೇಶಿಸಿದ ಚೆಹ್ರೆ ಥ್ರಿಲ್ಲರ್ ಚಿತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.