ಹಾಲಿವುಡ್ (ಲಾಸ್ ಏಂಜಲೀಸ್): ವಿಲಕ್ಷಣ ಮನೋವೈಜ್ಞಾನಿಕ ಸಿನಿಮಾ ‘ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್‘ ಆಸ್ಕರ್ ಪ್ರಶಸ್ತಿ ಗೆಲ್ಲುವ ಅತ್ಯುತ್ತಮ ಚಲನಚಿತ್ರವಾಗಿ ಹೊರಹೊಮ್ಮುವ ಸಂಭವವಿದೆ. ಈ ಸಿನಿಮಾ, ವಾಸ್ತವ ಜಗತ್ತಿಗಿಂತ ಹೊರತಾದ ಅತಿಮಾನುಷ ಶಕ್ತಿಯ ಕಥಾ ಹಂದರ ಹೊಂದಿದೆ.

‘ಆಸ್ಕರ್‘ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯಾಗಿದ್ದು ಇದರ 95ನೇ ಅಕಾಡೆಮಿ ಅವಾರ್ಡ್ ಸಮಾರಂಭ ಸೋಮವಾರ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ.

ಈ ಪ್ರಶಸ್ತಿಯ ಅತ್ಯುತ್ತಮ ಸಿನಿಮಾ ವಿಭಾಗಕ್ಕೆ ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕಿನೆರ್ಟ್ ಜಂಟಿ ನಿರ್ದೇಶನದ ‘ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್‘ ಎಂಬ ಇಂಗ್ಲೀಷ್ ಸಿನಿಮಾ ತೀರ್ಪುಗಾರರಿಂದ ಅತಿ ಹೆಚ್ಚು ನಾಮನಿರ್ದೇಶನಗೊಂಡಿದೆ. ಈ ಸಿನಿಮಾದ ಪ್ರಮುಖ ಪಾತ್ರಗಳನ್ನು ಏಷ್ಯಾದ ನಟನಟಿಯರು ನಿರ್ವಹಿಸಿದ್ದಾರೆ.

ಆಸ್ಕರ್ ಅತ್ಯುತ್ತಮ ಸಿನಿಮಾ ಪ್ರಶಸ್ತಿಯ ಸಂಭಾವ್ಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಇನ್ನೊಂದು ಸಿನಿಮಾ ಜೋಸೆಫ್ ಕೋಸಿನ್‌ಸ್ಕಿ ನಿರ್ದೇಶನದ ‘ಟಾಪ್ ಗನ್: ಮೇವರಿಕ್‘. ಈ ಚಲನಚಿತ್ರ ಮಿಲಿಟರಿಗೆ ಸಂಬಂಧಿಸಿದ ಕತೆ ಹೊಂದಿದ್ದು, ಇದರಲ್ಲಿ ಹಾಲಿವುಡ್‌ನ ಜನಪ್ರಿಯ ನಟ ಟಾಮ್ ಕ್ರೂಸ್ ಅಭಿನಯಿಸಿದ್ದಾರೆ.

‘ಟಾಪ್ ಗನ್: ಮೇವರಿಕ್‘ ಅಥವಾ ‘ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್‘ ಆಸ್ಕರ್ ಗೆಲ್ಲುವ ಅತ್ಯುತ್ತಮ ಸಿನಿಮಾವಾಗಬಹುದು ಎನ್ನಲಾಗುತ್ತಿದ್ದು, ಫಲಿತಾಂಶ ಸೋಮವಾರವಷ್ಟೇ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಘೋಷಣೆಯಾಗಲಿದೆ.

ಆಸ್ಕರ್ ಅಂಗಳದಲ್ಲಿ ಭಾರತ: ಆಸ್ಕರ್ ಅತ್ಯುತ್ತಮ ಮೂಲಗೀತೆ (ಒರಿಜಿನಲ್) ವರ್ಗದಲ್ಲಿ ‘ನಾಟು.. ನಾಟು...’ ಮತ್ತು ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ಆಲ್ ದಟ್ ಬ್ರೀತ್ಸ್’ ಹಾಗೂ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ದಿ ಎಲಿಫೆಂಟ್ ವಿಸ್ಪರ್ಸ್’ ಸ್ಪರ್ಧೆಯಲ್ಲಿವೆ. ಇದೇ ಮೊದಲಿಗೆ ಭಾರತ ನಿರ್ಮಿತ ಸಿನಿಮಾಗಳು ಆಸ್ಕರ್‌ನ ಹಲವು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿರುವುದು ವಿಶೇಷ.

‘ನಾಟು ನಾಟು’ ಗೀತೆಯ ಸಂಯೋಜಕ ಎಂ.ಎಂ.ಕೀರವಾಣಿ ಮತ್ತು ಗಾಯಕರಾದ ರಾಹುಲ್ ಸಿಪ್ಲಿಗುಂಜ್– ಕಾಲ ಭೈರವ ಅವರು ವೇದಿಕೆಯಲ್ಲಿ ನೇರಪ್ರದರ್ಶನ ನೀಡಲಿದ್ದಾರೆ. ಈ ವಿಭಾಗದಲ್ಲಿ ನಾಮಕರಣಗೊಂಡಿರುವ ಎಲ್ಲ ಐದು ಮೂಲ ಗೀತೆಗಳ ನೇರ ಪ್ರದರ್ಶನವು ನಡೆಯಲಿದೆ.

ಈ ಸಮಾರಂಭದಲ್ಲಿ ಪ್ರಶಸ್ತಿಯೊಂದನ್ನು ಪ್ರದಾನ ಮಾಡುವ ಅವಕಾಶ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ದೊರೆತಿದೆ.

ಆರ್‌ಆರ್‌ಆರ್ ಸಿನಿಮಾದ ಪ್ರಮುಖ ಪಾತ್ರದಲ್ಲಿರುವ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಮತ್ತು ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರೂ ಪ್ರೇಕ್ಷಕರಾಗಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.