ನಟ ಮಮ್ಮುಟ್ಟಿ ನಟಿಸಿರುವ ಬಹು ನಿರೀಕ್ಷಿತ ‘ಮಾಮಾಂಕಂ’ಮಲಯಾಳ ಚಿತ್ರವನ್ನು ಬಿಡುಗಡೆಯಾದ ಮೊದಲೇ ದಿನವೇ ನೋಡಲು ಅಭಿಮಾನಿಯೊಬ್ಬ ತನ್ನ ಮದುವೆಯ ದಿನವನ್ನೇ ಬದಲಿಸಿದ ಘಟನೆ ಕೇರಳದಲ್ಲಿ ನಡೆದಿದೆ.

ನವೆಂಬರ್ 21ರಂದು‘ಮಾಮಾಂಕಂ’ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದೇ ದಿನವೇ ಕೇರಳದ ಪರವೂರು ಎಂಬ ಗ್ರಾಮದಲ್ಲಿ ಮಮ್ಮುಟ್ಟಿಯ ಅಪ್ಪಟ ಅಭಿಮಾನಿ ಮೇಮಾನ್ ಸುರೇಶ್ ಮದುವೆ ಕೂಡ ನಿಗದಿಯಾಗಿತ್ತು. ಯಾವುದೇ ಕಾರಣಕ್ಕೂ ಮೊದಲ ದಿನದ ಮೊದಲ ಷೋ ತಪ್ಪಿಸಿಕೊಳ್ಳಬಾರದು ಎಂದು ಸುರೇಶ್ ಒಂದು ತಿಂಗಳು ಮುಂಚಿತವಾಗಿಯೇ ಮದುವೆಯಾಗಿದ್ದಾರೆ.

‘ಮೆಚ್ಚಿನ ನಟ, ನಟಿಯರಿಗಾಗಿ ಅಭಿಮಾನಿಗಳು ಏನೆಲ್ಲಾ ಮಾಡುತ್ತಾರೆ. ನಾನು ಮದುವೆ ದಿನ ಬದಲಿಸಿರುವುದು ಏನು ಮಹಾ. ಹೆಂಡತಿಯ ಜತೆ ನನ್ನ ಮೆಚ್ಚಿನ ನಟನ ಚಿತ್ರ ನೋಡುವ ಅವಕಾಶ ಸಿಕ್ಕಿದೆ’ ಎಂದು ಸುರೇಶ್ ಹೇಳಿದ್ದಾರೆ.

ಕಾವ್ಯ ಕಂಪನಿ ನಿರ್ಮಿಸಿರುವ ಈ ಚಿತ್ರಕ್ಕೆ ಎಂ. ಪದ್ಮಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಲಯಾಳ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಹಿಂದಿಗೂ ಡಬ್ ಆಗುತ್ತಿರುವ ಮೊದಲ ಮಲಯಾಳ ಚಿತ್ರ ಎಂಬ ಹೆಗ್ಗಳಿಕೆ ಈ ಚಿತ್ರದ್ದು.

ಮಮ್ಮುಟ್ಟಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಚಿತ್ರ ಭಾರಿ ಕುತೂಹಲ ಮೂಡಿಸಿದೆ. ತಮ್ಮ ನೆಚ್ಚಿನ ನಟನನ್ನು ವಿಭಿನ್ನ ಲುಕ್‌ನಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೇರಳದ ಪ್ರಾಚೀನ ಆತ್ಮರಕ್ಷಣೆ ಕಲೆ ಕಳರಿಪಯಟ್ಟು ಯೋಧನ ವೇಷದಲ್ಲಿ ಮಮ್ಮುಟ್ಟಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ‘ಮಾಮಾಂಕಂ’ ಕೇರಳದ ಚಾರಿತ್ರಿಕ ಪಾತ್ರಗಳ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿದೆ. ಸದ್ಯಕ್ಕೆ ಚಿತ್ರ ಬಿಡುಗಡೆ ದಿನಾಂಕವನ್ನು ಡಿಸೆಂಬರ್ 12ಕ್ಕೆ ಮುಂದೂಡಿರುವ ಸುದ್ದಿಗಳೂ ಕೇಳಿ ಬರುತ್ತಿದೆ. ಒಂದು ವೇಳೆ ಹಾಗಾದರೆ ಮಮ್ಮುಟ್ಟಿ ಅಭಿಮಾನಿಗಳು ನಿರಾಶರಾಗುವುದು ಖಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.