2022ನೇ ಸಾಲಿನ ದಕ್ಷಿಣ ಭಾರತದ ಫಿಲಂ ಫೇರ್ ಪ್ರಶಸ್ತಿ ಸಮಾರಂಭ ಮುಕ್ತಾಯಗೊಂಡಿದ್ದು, ಡಾಲಿ ಧನಂಜಯ(ಬಡವ ರಾಸ್ಕಲ್) ಕನ್ನಡದ ಉತ್ತಮ ನಟ ಮತ್ತು ಯಜ್ಞಾ ಶೆಟ್ಟಿ (ಆಕ್ಟ್ 1978) ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. “ಆಕ್ಟ್ 1978” ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದೆ.

ಸೂರ್ಯ ಮತ್ತು ಲಿಜೋಮೋಲ್ ಜೋಸ್ ಅವರು ಕ್ರಮವಾಗಿ ತಮಿಳಿನ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಪಡೆದರು. ಅಲ್ಲು ಅರ್ಜುನ್ ಮತ್ತು ಸಾಯಿ ಪಲ್ಲವಿ ತೆಲುಗಿನ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಯನ್ನು ಪಡೆದುಕೊಂಡರೆ, “ಪುಷ್ಪಾ: ದಿ ರೈಸ್- ಭಾಗ 1” ಅತ್ಯುತ್ತಮ ತೆಲುಗು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಮಲಯಾಳದಲ್ಲಿ ಬಿಜು ಮೆನನ್ ಮತ್ತು ನಿಮಿಷಾ ಸಜಯನ್ಗೆ ಪ್ರಶಸ್ತಿ ಒಲಿಯಿತು.

ನಾಲ್ಕು ಭಾಷೆಯ ಚಲನಚಿತ್ರ ರಂಗದ ಗಣ್ಯರು ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವರ್ಷದ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ಅಲ್ಲು ಅರವಿಂದ್ ಅವರಿಗೆ ನೀಡಲಾಯಿತು.

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ) ಭಾಜನರಾದರು. ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೇಲ್), ಮಿಲನಾ ನಾಗರಾಜ್ (ಲವ್ ಮಾಕ್ಟೇಲ್), ಅಮೃತ ಅಯ್ಯಂಗಾರ್ (ಬಡವ ರಾಸ್ಕಲ್), ಬಿ.ಸುರೇಶ (ಆಕ್ಟ್ 1978), ಉಮಾಶ್ರೀ (ರತ್ನನ್ ಪ್ರಪಂಚ) ಕೂಡ ಪ್ರಶಸ್ತಿ ಪಡೆದರು.

ಅತ್ಯುತ್ತಮ ಸಂಗೀತಕ್ಕಾಗಿ ವಾಸುಕಿ ವೈಭವ್ (ಬಡವ ರಾಸ್ಕಲ್), ಅತ್ಯುತ್ತಮ ಸಾಹಿತ್ಯಕ್ಕಾಗಿ ಜಯಂತ್ ಕಾಯ್ಕಿಣಿ, ಅತ್ಯುತ್ತಮ ಹಿನ್ನೆಲೆ ಗಾಯಕರಾಗಿ ರಘು ದೀಕ್ಷಿತ್, ಅನುರಾಧಾ ಭಟ್, ಅತ್ಯುತ್ತಮ ನೃತ್ಯ ಸಂಯೋಜನೆಗೆ ಜಾನಿ ಮಾಸ್ಟರ್ ಪ್ರಶಸ್ತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.