ಶ್ರೀಲಂಕಾದ ಹೆಸರಾಂತ ಕ್ರಿಕೆಟಿಗ ಮುತ್ತಯ್ಯ ಮುರುಳೀಧರನ್ ಜೀವನಗಾಥೆ ಆಧಾರಿತ ‘800’ ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದು, ಅ.6ರಂದು ಚಿತ್ರ ತೆರೆಗೆ ಬರುತ್ತಿದೆ.

‘ತಮಿಳಿನ ಹೆಸರಾಂತ ನಿರ್ದೇಶಕ ವೆಂಕಟ್ ಪ್ರಭು ನನ್ನ ಪತ್ನಿಗೆ ಪರಿಚಯ. ಅವರು ನನ್ನ ಜೀವನಚರಿತ್ರೆಯನ್ನು ಸಿನಿಮಾವಾಗಿಸುವ ಪ್ರಸ್ತಾಪ ಮುಂದಿಟ್ಟರು. ಮೊದಲಿಗೆ ಒಪ್ಪಿಕೊಳ್ಳಲಿಲ್ಲ. ಇದರಿಂದ ನಾನು ಶ್ರೀಲಂಕಾದಲ್ಲಿ ನಡೆಸುತ್ತಿರುವ ಟ್ರಸ್ಟ್ಗೆ ಸಹಾಯವಾಗಬಹುದೆಂದು ಜೊತೆಗಿದ್ದವರು ನನ್ನನ್ನು ಒಪ್ಪಿಸಿದರು. ವಿಜಯ್ ಸೇತುಪತಿ ಈ ಚಿತ್ರ ಮಾಡಬೇಕಿತ್ತು. ನಿರ್ದೇಶಕರು ಬದಲಾದರು, ನಿರ್ಮಾಣ ಸಂಸ್ಥೆ ಬದಲಾಯಿತು. ಚಿತ್ರೀಕರಣದ ವೇಳೆ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಪ್ರಾರಂಭವಾಯಿತು. ಎಲ್ಲ ಅಡೆತಡೆಗಳನ್ನು ದಾಟಿ ಅಂತಿಮವಾಗಿ ಚಿತ್ರ ತೆರೆಗೆ ಬರುತ್ತಿರುವುದು ಸಂತೋಷದ ಸಂಗತಿ’ ಎಂದರು ಮುರುಳೀಧರನ್.

ಎಂ.ಎಸ್.ಶ್ರೀಪತಿ ಕಥೆ ಬರೆದು ನಿರ್ದೇಶಿಸಿರುವ ಚಿತ್ರವನ್ನು ಶ್ರೀದೇವಿ ಮೂವೀಸ್ ನಿರ್ಮಾಣ ಮಾಡಿದೆ. ಬಾಲಿವುಡ್ ನಟ ಮಧುರ್ ಮಿತ್ತಲ್ ಮುರುಳೀಧರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು, ಹಿಂದಿ, ತೆಲುಗು ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ.

‘ಮುರುಳೀಧರನ್ ನಗುಮುಖದ ಗೆಳೆಯ. ಟೆಸ್ಟ್ ಕ್ರಿಕೆಟ್ನಲ್ಲಿ 800 ವಿಕೆಟ್ ಪಡೆದು ಸಾಧನೆಗೈದಿದ್ದಾರೆ. ಕ್ರಿಕೆಟ್ನ ಆಚೆಗೆ ಅತ್ಯುತ್ತಮ ವ್ಯಕ್ತಿ ಕೂಡ. ಸಿನಿಮಾ ಯಶಸ್ವಿಯಾಗಲಿ’ ಎಂದರು ಅನಿಲ್ ಕುಂಬ್ಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.