ಜಿಮ್ ರವಿ ಪ್ರಥಮಬಾರಿ ನಾಯಕನಾಗಿ, ರವೀಸ್ ಜಿಮ್ ಬ್ಯಾನರ್ನಡಿಯಲ್ಲಿ ನಿರ್ಮಾಣ ಮಾಡಿರುವ ‘ಪುರುಷೋತ್ತಮ’ ತೆರೆಗೆ ಬರಲು ಸಿದ್ದವಾಗಿದ್ದು, ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಏಪ್ರಿಲ್ ಎರಡನೇ ವಾರದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ.

ಶೋಷಣೆಗೊಳಗಾದ ಹೆಣ್ಣನ್ನು ಗಂಡ ಹೇಗೆ ಕಾಪಾಡುತ್ತಾನೆ. ಗಂಡನ ಜವಾಬ್ದಾರಿ ಎಷ್ಟು ಸೂಕ್ಷ್ಮಇರುತ್ತದೆ ಎನ್ನುವುದು ಸಿನಿಮಾದ ಎಳೆ.
ಎಲ್ಲಾ ವರ್ಗದವರು ಮೆಚ್ಚಿಕೊಳ್ಳುವ ಚಿತ್ರವಿದು ಎಂಬುದುಸಿನಿಪರಿಣತರ ಮಾತಾಗಿದೆ.ನಾಯಕನದ್ದು ವಕೀಲರ ಪಾತ್ರ. ಈಗಾಗಲೇ ಬಿಡುಗಡೆ ಆಗಿರುವ ‘ಸಂಸಾರ ಅಂದ್ಮಲೆ’ ಹಾಡು ಇಲ್ಲಿಯವರೆಗೂ ಮೂರು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಈ ಚಿತ್ರದ ಹಾಡುಗಳನ್ನು ಜಿಮ್ ರವಿ ಯೂಟ್ಯೂಬ್ ಚಾನಲ್ನಲ್ಲಿ ವೀಕ್ಷಿಸಬಹುದು.

‘ದಿಲ್ದಾರ’ ಮತ್ತು ‘ನಾನು ನಮ್ಮುಡ್ಗಿ, ಖರ್ಚ್ಗೊಂದು ಮಾಫಿಯಾ’ ಚಿತ್ರಗಳನ್ನು ನಿರ್ದೆಶನ ಮಾಡಿರುವ ಅಮರ್ನಾಥ್ ಎಸ್.ವಿ. ಚಿತ್ರಕತೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಪೂರ್ವ ನಾಯಕಿ. ಇವರೊಂದಿಗೆ ಎ.ವಿ.ಹರೀಶ್, ಮೈಸೂರು ಪ್ರಭು ಸೇರಿದಂತೆ ಹಲವು ಖ್ಯಾತ ಕಲಾವಿದರುಅಭಿನಯಿಸಿದ್ದಾರೆ.

ಉಪೇಂದ್ರ ಸಂದರ್ಶನ: ಪ್ರಯೋಗದತ್ತ ರಿಯಲ್ ಸ್ಟಾರ್

ಆನಂದ್ ಪ್ರಿಯಾ, ಪ್ರಮೋದ್ ಮರವಂತೆ ಹಾಗೂ ನಿರ್ದೇಶಕರು ರಚಿಸಿರುವ ಸಾಹಿತ್ಯಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕುಮಾರ್ ಎಂ., ಸಂಕಲನ ಅರ್ಜುನ್ ಕಿಟ್ಟು, ನೃತ್ಯ ಕಲೈ ಅವರದಾಗಿದೆ. ಅಂದ ಹಾಗೆ ಚಿತ್ರವು ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

‘ಬಂಗಾರ’ಕ್ಕೆ 50: ಕನ್ನಡ ಸಿನಿಮಾ ಉದ್ಯಾನದ ಚಿನ್ನದ ಮಲ್ಲಿಗೆಯ ಹೊಳಪು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.