ಬೆಂಗಳೂರು: ಬಾಲಿವುಡ್ ನಟಿ, ನಿರ್ಮಾಪಕಿ ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಇದೀಗ ಒಂದು ಮಗುವಿನ ತಾಯಿ. ಆದರೂ ಕೂಡ ಅವರು ಫಿಟ್ನೆಸ್ನ್ನು ಕಾಪಾಡಿಕೊಂಡು ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್ಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಅನುಷ್ಕಾ ಅವರು ಕಳೆದ ಜನವರಿಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವಿಗೆ ‘ವಾಮಿಕಾ‘ ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ಲಂಡನ್ನ ‘ಗ್ರಾಜಿಯಾ‘ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಾವು ಗರ್ಭಾವಸ್ಥೆಯಲ್ಲಿ ಅನುಭವಿಸಿದ ತಳಮಳಗಳನ್ನು ಅವರು ತೆರೆದಿಟ್ಟಿದ್ದಾರೆ.

‘ಮಗುವಿಗೆ ಜನ್ಮ ನೀಡಿದ ನಂತರ ನಾನು ನನ್ನ ದೇಹವನ್ನು ಎಲ್ಲಿ ದ್ವೇಷಿಸಲು ಆರಂಭಿಸುತ್ತೇನೋ ಎಂಬುದರ ಬಗ್ಗೆ ನಿಜಕ್ಕೂ ಚಿಂತಾಕ್ರಾಂತಳಾಗಿದ್ದೆ‘ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. ‘ಈ ತಳಮಳ ಅದರಲ್ಲೂ ಡೆಲಿವರಿಯ ಒಂದು ವಾರದ ಮುಂಚೆ ತೀರಾ ಕಾಡಿತ್ತು‘ ಎಂದು ಹೇಳಿಕೊಂಡಿದ್ದಾರೆ.

‘ಆದರೆ, ನಾನು ಮಗುವಿಗೆ ಜನ್ಮ ನೀಡಿದ ನಂತರ ಮೊದಲಿಗಿಂತಲೂ ಸುಂದರ ತ್ವಚೆ ಹೊಂದಿದ್ದೇನೆ ಎನಿಸುತ್ತಿದೆ.ಗರ್ಭಾವಸ್ಥೆಯಲ್ಲಿ ಇರುವಾಗ ಪ್ರತಿ ಹೆಣ್ಣು ಅನುಭವಿಸುವ ತಳಮಳಗಳು ಅದೊಂದು ಮನಸ್ಥಿತಿ ಅಷ್ಟೇ. ನಮ್ಮ ದೇಹ ಹೇಗಿದೆಯೋ ಹಾಗೇ ನಾವು ಅದನ್ನು ಒಪ್ಪಿಕೊಳ್ಳಬೇಕು. ನಾವು ಅದರ ಬಗ್ಗೆ ಅಪಾರವಾದ ಆತ್ಮವಿಶ್ವಾಸವನ್ನು ಹೊಂದಬೇಕು'ಎಂದು ಅವರು ಹೇಳಿದ್ದಾರೆ.

‘ನಾನು ಇನ್ಮುಂದೆ ದೇಹದ ಬಗ್ಗೆ ಆ ರೀತಿ ಯೋಚಿಸುವುದಿಲ್ಲ. ನನ್ನ ಮಗಳನ್ನು ಆ ರೀತಿ ಬೆಳೆಸಲು ಪ್ರಯತ್ನ ಪಡುತ್ತೇನೆ. ನಾನು ನನ್ನ ಫೋಟೊಗಳನ್ನು ಕ್ಲಿಕ್ಕಿಸಿದ ಮೇಲೆ ಅದರಲ್ಲಿ ಹೇಗೆ ಕಾಣುತ್ತೇನೆ ಎಂದು ತಿಳಿದ ಮೇಲೆಯೇ ನಾನು ಅದನ್ನು ಪೋಸ್ಟ್ ಮಾಡುತ್ತೇನೆ'ಎಂದಿದ್ದಾರೆ.

ಸದ್ಯ ಅನುಷ್ಕಾ ಶರ್ಮಾ, 'ಮೈ' ಎಂಬ ನೆಟ್ಫ್ಲಿಕ್ಸ್ ಸಿರೀಸ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕಾಂಡೋಮ್ ಹಿಡಿದು ಬಂದ ನಟಿ ರಾಕುಲ್ ಪ್ರೀತ್ ಸಿಂಗ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.