ದೆಹಲಿ: ಮೊದಲ ಮಗುವಿನ ಆಗಮನದ ಬಗ್ಗೆ ನಟಿ ಇಲಿಯಾನ ಡಿಕ್ರೂಝ್ ಸುಳಿವು ನೀಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. ಇಲಿಯಾನ ಪೋಸ್ಟ್ ಅನ್ನು ನೋಡಿದ ನೆಟ್ಟಿಗರು ಯಾವಾಗ ಮದುವೆಯಾಗಿದ್ದೀರಿ? ಮಗುವಿನ ತಂದೆ ಯಾರು? ಎಂದು ಪ್ರಶ್ನಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಮಗುವಿನ ಬಟ್ಟೆಯ ಚಿತ್ರ ಹಾಗೂ ‘ಮಮ್ಮ‘ ಎಂದು ಬರೆದಿರುವ ಪೆಂಡೆಂಟ್ ಪೋಟೊವನ್ನು ಹಂಚಿಕೊಂಡಿರುವ ನಟಿ ಇಲಿಯಾನಾ, ‘ಕಮಿಂಗ್ ಸೂನ್, ನಿನ್ನನ್ನು ನೋಡಲು ಕಾತೂರದಿಂದ ಕಾಯುತ್ತಿದ್ದೇನೆ ಲಿಟಲ್ ಡಾರ್ಲಿಂಗ್ ‘ ಎಂದು ಬರೆದು ಕೊಂಡಿದ್ದಾರೆ.

ಇಲಿಯಾನ ಪೋಸ್ಟ್ ಹಾಕುತ್ತಲೇ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ. ನೀವು ಯಾವಾಗ ಮದುವೆಯಾಗಿದ್ದೀರಿ? ಮಗುವಿನ ತಂದೆ ಯಾರು? ಎಂಬೆಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ. ‘ನೀವು ಬಾಲಿವುಡ್ ನಟಿ ಕತ್ರಿನಾ ಕೈಫ್ ಸಹೋದರನ ಜೊತೆ ಡೇಟಿಂಗ್ ನಡೆಸುತ್ತಿದ್ದಿರಲ್ಲವೆ?. ಅಂದರೆ ಕತ್ರಿಕಾ ಕೈಪ್ ಅತ್ತೆ ಆಗುತ್ತಿದ್ದಾರಾ?‘ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.

ಇದೆಲ್ಲದರ ನಡುವೆ ನಟಿ ಇಲಿಯಾನಾ ತಾನು ಗರ್ಭಿಣಿಯಾಗಿದ್ದೇನೆಯೇ? ದತ್ತು ತೆಗೆದುಕೊಳ್ಳುತ್ತಿದ್ದೇನೆಯೇ? ಅಥವಾ ಬಾಡಿಗೆ ತಾಯಿಯ ಮೂಲಕ ಮಗು ಪಡೆಯುತ್ತಿದ್ದೇನೆಯೇ ಎಂಬುವುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.