ಮುಂಬೈ: ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಜವಾನ್ ಚಿತ್ರ ಬಿಡುಗಡೆಗೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಈ ನಡುವೆ ಚಿತ್ರವು ಮುಂಗಡ ಟಿಕೆಟ್ ಬುಕಿಂಗ್ ಮೂಲಕವೇ ಸುದ್ದಿ ಮಾಡಿದೆ.

ಎಕ್ಸ್‌ನಲ್ಲಿ(ಟ್ವಿಟರ್) ಚಿತ್ರದ ಮುಂಗಡ ಬುಕಿಂಗ್ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಸಿನಿಮಾ ಉದ್ಯಮ ವಿಶ್ಲೇಷಕ ಮನೋಬಲ ವಿಜಯಬಾಲನ್, ಜವಾನ್ ಚಿತ್ರವೂ ವಿಶ್ವದಾದ್ಯಂತ ಈಗಾಗಲೇ ₹51.17 ಕೋಟಿ ಗಳಿಕೆ ಕಂಡಿದೆ ಎಂದು ಬರೆದುಕೊಂಡಿದ್ದಾರೆ.

ಭಾರತದಲ್ಲಿ ಜವಾನ್‌ನ ಮೊದಲ ದಿನದ ಬುಕಿಂಗ್ ಮೊತ್ತವು ಪಠಾಣ್ ಚಿತ್ರದ ಮೊದಲ ದಿನದ ಮುಂಗಡ ಬುಕಿಂಗ್(₹32 ಕೋಟಿ) ಮೊತ್ತವನ್ನು ಮೀರಿಸಿದೆ. ಶಾರುಖ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಪಠಾಣ್ ವಿಶ್ವದಾದ್ಯಂತ ₹1000 ಕೋಟಿ ಗಳಿಸಿತ್ತು.

'ಜವಾನ್" ಮುಂಗಡ ಬುಕ್ಕಿಂಗ್

ಜವಾನ್ ಚಿತ್ರವು ಬಿಡುಗಡೆಗೂ ಮುನ್ನವೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅರ್ಧಶತಕ ಬಾರಿಸಿದೆ. ಮೊದಲ ದಿನದ ಬುಕಿಂಗ್ ಮೂಲಕ ಭಾರತದಲ್ಲಿ ₹32.47 ಕೋಟಿ ಮತ್ತು ವಿದೇಶದಲ್ಲಿ ₹18.70 ಕೋಟಿ (2.25 ಮಿಲಿಯನ್ ಡಾಲರ್] ಸೇರಿ ಒಟ್ಟು ₹51.17 ಕೋಟಿ ಗಳಿಸಿದೆ. ಅಲ್ಲದೆ, ಮುಂಗಡ ಬುಕ್ಕಿಂಗ್‌ನಲ್ಲಿ ಪಠಾಣ್ ದಾಖಲೆ ಹಿಂದಿಕ್ಕಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಈವರೆಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಜವಾನ್ ಚಿತ್ರದ 3,91,000 ಟಿಕೆಟ್‌ಗಳು ಮಾರಾಟವಾಗಿವೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಈ ಚಿತ್ರದ 7 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟ ಮಾಡಿದೆ ಎಂದು ಮಂಗಳವಾರ ವರದಿಯಾಗಿತ್ತು.

ಅಲ್ಲದೆ, ಜವಾನ್ ಚಿತ್ರವು ಮಲ್ಟಿಪ್ಲೆಕ್ಸ್‌ಗಳಲ್ಲಿ ಮೊದಲ ದಿನದ ಅತಿ ಹೆಚ್ಚು ಮುಂಗಡ ಬುಕಿಂಗ್ ಪಡೆದ ಸಾರ್ವಕಾಲಿಕ ಟಾಪ್ 5 ಚಿತ್ರಗಳ ಸಾಲಿನಲ್ಲಿ ಸೇರಿದೆ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.