ನಿರ್ದೇಶಕ, ನಟ ಜೋಗಿ ಪ್ರೇಮ್ ಅವರು ಬಣ್ಣ ಹಚ್ಚಲು ಮುಂದಾಗಿದ್ದಾರೆ. ಚಿತ್ರದ ಹೆಸರು ಇನ್ನಷ್ಟೇ ಗೊತ್ತಾಗಬೇಕಿದೆ. ಎಂ. ಶಶಿಧರ್ ಅವರು ಈ ಚಿತ್ರದ ನಿರ್ದೇಶಕರು. ಬಹಳ ವರ್ಷಗಳ ನಂತರ ಪ್ರೇಮ್ ಅವರೇ ಮತ್ತೆ ನಾಯಕ ನಟನಾಗಲು ತಯಾರಿ ನಡೆಸಿದ್ದಾರೆ.

ಚಿತ್ರದಲ್ಲಿ ಸೈಕಾಲಾಜಿಕಲ್ ಥ್ರಿಲ್ಲರ್ ಕತೆ ಇರಲಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರಲಿದೆ. ಬೇರೆ ಭಾಷೆಗಳ ತಾರೆಯರೂ ಜೊತೆಗಿರಲಿದ್ದಾರೆ.ಅ. 22ಕ್ಕೆ ಪ್ರೇಮ್ ಹುಟ್ಟು ಹಬ್ಬದ ದಿನದಂದು ಚಿತ್ರದ ಫಸ್ಟ್ ಲುಕ್ ಬಿಡಲು ಚಿತ್ರತಂಡ ತೀರ್ಮಾನಿಸಿದೆ.

ಯಾರು ಶಶಿಧರ್?
ಮೈಸೂರಿನವರಾದ 28 ವರ್ಷದ ಎಂ. ಶಶಿಧರ್ ಅವರು ಫಿಲ್ಮ್ ಮೇಕಿಂಗ್‌ನಲ್ಲಿ ಎಂಎಸ್‌ಸಿ ಪದವೀಧರ. VFX ನಲ್ಲಿ ತುಂಬ ಪರಿಣತ. ಈಗಾಗಲೇ ಎಲ್ಲಾ ಭಾಷೆಗೆ ಡಬ್ ಆಗಿ, ಸಾಯಿ ಕುಮಾರ್, ಸಂಪತ್ ರಾಜ್, ಅರುಣ್ ಸಾಗರ್, ದೇವಗಿಲ್, ರಾಹುಲ್ ದೇವ್ ಅಂತಹ ತಾರಾಬಳಗವಿರುವ, ಬಿಡುಗಡೆಗೆ ಸಿದ್ಧವಾಗಿರುವ ‘ಘಾರ್ಗಾ’ ಚಿತ್ರವನ್ನು ತುಂಬ ಅಚ್ಚುಕಟ್ಟಾಗಿ ಚಿತ್ರೀಕರಿಸಿದ್ದಾರೆ, ಅಲ್ಲದೆ ‘ಘಾರ್ಗಾ’ ಚಿತ್ರದ ಮೂಲಕ ಅಶ್ವಿನಿ ರಾಮ್ ಪ್ರಸಾದ್ ಅವರ ಮಗನಾದ ಅರುಣ್ ರಾಮ್ ಪ್ರಸಾದ್ ಅವರನ್ನು ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಪರಿಚಯಿಸಿದ್ದಾರೆ.

ಪ್ರೇಮ್ ಅವರ ಹೊಸ ಚಿತ್ರಕ್ಕೆ ಎ2 ಫಿಲ್ಮ್ಸ್ ಹಾಗೂ ಪ್ರೇಮ್ ಡ್ರೀಮ್ಸ್ ಜಂಟಿಯಾಗಿ ಬಂಡವಾಳ ಹೂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.