‘ಆರ್ಆರ್ಆರ್ ಚಿತ್ರದ ಕನ್ನಡ ಅವತರಣಿಕೆ ಡಬ್ ಮಾಡುವಾಗ ನನ್ನ ಅಮ್ಮ ಕೇರ್ಫುಲ್ ಆಗಿ ಡಬ್ ಮಾಡು ಅಲ್ಲೆಲ್ಲಾ ನಮ್ಮವರೇ ಇದ್ದಾರೆ. ತಲೆತಗ್ಗಿಸುವ ಹಾಗೆ ಡಬ್ ಮಾಡಬೇಡ ಎಂದು ಕಿವಿ ಮಾತು ಹೇಳಿದರು’.

ಹೀಗೆಂದು ಹೊಸ ವಿಷಯ ತೆರೆದಿಟ್ಟವರು ಆರ್ಆರ್ಆರ್ನ ನಟ ಜ್ಯೂನಿಯರ್ ಎನ್ಟಿಆರ್. ಆರ್ಆರ್ಆರ್ ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್ ಬಿಡುಗಡೆ ವೇಳೆ ಶುಕ್ರವಾರ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

‘ಅಮ್ಮ ಕುಂದಾಪುರದವರು. ಆದರೆ ನಾನು ಹುಟ್ಟಿ ಬೆಳೆದದ್ದೆಲ್ಲಾ ಹೈದರಾಬಾದ್ನಲ್ಲೇ. ಹಾಗಾಗಿ ಕನ್ನಡದಲ್ಲಿ ಮಾತನಾಡಬಲ್ಲೆ. ಆದರೂ ಆಗಾಗ ತಡವರಿಸುತ್ತೇನೆ. ಈ ಡಬ್ಬಿಂಗ್ ವೇಳೆ ವರದರಾಜು ಅವರು ಸಾಕಷ್ಟು ಸಹಾಯ ಮಾಡಿದರು. ಹೀಗಾಗಿ ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು’ ಎಂದರು ಅವರು.

ಕಾಡಿದ ಪುನೀತ್ ನೆನಪು

ಗೆಳೆಯ, ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿದ ಜ್ಯೂನಿಯರ್ ಎನ್ಟಿಆರ್, ‘ಅಪ್ಪು ಇಲ್ಲದ ಕರ್ನಾಟಕ ಶೂನ್ಯ ಅನಿಸುತ್ತಿದೆ. ಅವರ ಆಶೀರ್ವಾದ ನಮ್ಮ ಮೇಲೆ ಇರಲಿ. ಅವರ ನೆನಪಿನ ಈ ಹಾಡು ಹಾಡುತ್ತಿರುವುದು ಇದೇ ಮೊದಲು ಹಾಗೂ ಇದೇ ಕೊನೆ’ ಎಂದು ಹೇಳಿ ‘ಗೆಳೆಯಾ ಗೆಳೆಯಾ... ಗೆಲುವು ನಮ್ದೇನಯ್ಯಾ...’ ಎಂದು ಹಾಡು ಹಾಡಿ ಗೌರವ ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.