ಕ್ರಿಕೆಟಿಗ ಶ್ರೀಶಾಂತ್(Sreesanth)ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದು, ತಮಿಳುಸಿನಿಮಾನದಲ್ಲಿ ಅಭಿನಯ ಮಾಡುತ್ತಿದ್ದಾರೆ.

ಶ್ರೀಶಾಂತ್ ಕ್ರಿಕೆಟ್ ಮಾತ್ರವಲ್ಲದೇ ಜಾಹೀರಾತು ಸೇರಿದಂತೆ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಹೊಂದಿದ್ದಾರೆ. ಈ ಸಲ ಅವರಿಗೆಸ್ಟಾರ್ ನಟ-ನಟಿಯರ ಜೊತೆಗೆ ಅಭಿನಯಿಸುವ ಅವಕಾಶ ಸಿಕ್ಕಿರುವುದುವಿಶೇಷ.

ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಆ್ಯಕ್ಷನ್-ಕಟ್ ಹೇಳುತ್ತಿರುವ ‘ಕಾದು ವಾಕುಲ ರೆಂಡು ಕಾದಲ್’(Kaathu Vaakula Rendu Kaadhal) ಸಿನಿಮಾದಲ್ಲಿ ಶ್ರೀಶಾಂತ್ ಅಭಿನಯಿಸುತ್ತಿದ್ದಾರೆ. ವಿಜಯ್ ಸೇತುಪತಿ, ಸಮಂತಾ, ನಯನತಾರಾ ಇದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮೂರು ದಿನಗಳ ಹಿಂದೆ (ಫೆ.7) ಶ್ರೀಶಾಂತ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿ, ಅದರಲ್ಲಿ ಶ್ರೀಶಾಂತ್ ಅವರ ಪಾತ್ರದ ಬಗ್ಗೆ ಮಾಹಿತಿ ನೀಡಿತ್ತು.

ಶ್ರೀಶಾಂತ್ ‘ಕಾದು ವಾಕುಲ ರೆಂಡು ಕಾದಲ್’ ಸಿನಿಮಾದಲ್ಲಮೊಹಮ್ಮದ್ ಮೊಬಿ (Mohammed Mobi) ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕ್ರಿಕೆಟ್ ಮೈದಾನದಲ್ಲಿ ಚಾಂಪಿಯನ್ ಆಗಿದ್ದ ಶ್ರೀಶಾಂತ್ ಅವರು ಸಿನಿಮಾರಂಗದಲ್ಲೂ ಆಳ್ವಿಕೆ ಮಾಡುತ್ತಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಸಿನಿಮಾ ಪ್ರೇಕ್ಷಕರು ಖುಷಿಯಾಗಿದ್ದು, ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಓದಿ...Chocolate Day: ಪ್ರೀತಿಸುವ ಮನಸುಗಳಿಗೆ 'ಚಾಕೊಲೇಟ್ ಡೇ'

ಇದೇ 11ರಂದು ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಾಗಿ ವಿಘ್ನೇಶ್ ಶಿವನ್ ಹೇಳಿದ್ದಾರೆ. ಟೀಸರ್ನಲ್ಲಿ ಶ್ರೀಶಾಂತ್ ಲುಕ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಓದಿ...ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಾಠಿಯಾವಾಡಿ' ಫೆ.25ಕ್ಕೆ ತೆರೆಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.