‘ಛಪಾಕ್’ ಲುಕ್ ಬಗ್ಗೆ ಟಿಕ್ಟಾಕ್ನಲ್ಲಿ ಚಾಲೆಂಜ್ ನೀಡಿದ್ದ ದೀಪಿಕಾ ಪಡುಕೋಣೆ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಟಿಕ್ಟಾಕ್ ಚಾಲೆಂಜ್ ಬಗ್ಗೆ ತಮಗೂ ಬೇಸರವಿದೆ ಎಂದಿರುವ ಕಂಗನಾ ರನೋಟ್ ಈ ಕೂಡಲೇ ದೀಪಿಕಾ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದ್ದಾರೆ.

ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರ ಬಗ್ಗೆ ದೀಪಿಕಾ ಪಡುಕೋಣೆ ಅಸೂಕ್ಷ್ಮವಾಗಿ ವರ್ತಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಕಂಗನಾ, ‘ನನ್ನ ತಂಗಿ ರಂಗೋಲಿ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆ. ದೀಪಿಕಾ ಅವರ ‘ಛಪಾಕ್’ ಲುಕ್ ಚಾಲೆಂಜ್ ನೋಡಿ ತುಂಬಾ ಬೇಸರಗೊಂಡಿದ್ದಾಳೆ. ಇದಕ್ಕೆ ದೀಪಿಕಾ ಉತ್ತರಿಸಬೇಕು’ ಎಂದಿದ್ದಾರೆ.

ಟಿಕ್ಟಾಕ್ನಲ್ಲಿ ‘ಛಪಾಕ್’ ಲುಕ್ ಮರು ಸೃಷ್ಟಿ ಮಾಡಿ ಎಂದುದೀಪಿಕಾ ಪಡುಕೋಣೆ ಚಾಲೆಂಜ್ ವಿಡಿಯೊ ಮಾಡಿದ್ದರು. ಛಪಾಕ್ ಸಿನಿಮಾದಲ್ಲಿನ ಆ್ಯಸಿಡ್ ದಾಳಿ ಸಂತ್ರಸ್ತೆಯ ಸುಟ್ಟಹೋದ ಮುಖದ ಹಾಗೆ ಮೇಕಪ್ ಮಾಡಿಕೊಳ್ಳಬೇಕು ಎಂದು ಟಿಕ್ಟಾಕ್ನಲ್ಲಿ ಚಾಲೆಂಜ್ ಮಾಡಿದ್ದರು.

‘ನನ್ನ ತಂಗಿಯಂತೆ ಆ್ಯಸಿಡ್ ದಾಳಿಗೆ ಒಳಗಾದ ಎಲ್ಲಾ ಸಂತ್ರಸ್ತೆಯರಿಗೆ ಕ್ಷಮೆ ಕೋರಬೇಕು. ಆ್ಯಸಿಡ್ ದಾಳಿಗೆ ಒಳಗಾದವರಂತೆ ಮೇಕಪ್ ಮಾಡಿಕೊಳ್ಳಬೇಕು ಎಂಬ ಚಾಲೆಂಜ್ ಅನ್ನು ಯಾರೂ ಸ್ವೀಕರಿಸಬೇಡಿ’ ಎಂದಿದ್ದಾರೆ ಕಂಗನಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.